ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ: ಕೋವಿಡ್-19 ಎರಡನೆ ಅಲೆ ವೇಗದ ಮಿತಿಯನ್ನು ಹೆಚ್ಚಿಸಿದ್ದು ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಅತಿ ಹೆಚ್ಚು ಜಾಗೃತರಾಗಿರಬೇಕು ಎಂದು ಪೋಲೀಸ್ ಇನ್ಸ್‌ಪೆಕ್ಟರ್ ಜೆ.ಎಸ್ ತಿಪ್ಪೇಸ್ವಾಮಿ ಸಲಹೆ ನೀಡಿದರು.
ನಗರಸಭೆ ಅಧಿಕಾರಿಗಳೊದಿಗೆ ರೋಡಿಗಿಳಿದ ಅವರು, ನೆಹರೂ ವೃತ್ತ, ಪಾವಗಡ ರಸ್ತೆ, ಚಿತ್ರುದುರ್ಗ ಮುಖ್ಯ ರಸ್ತೆ, ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು, ಸೋಮುಗುದ್ದು ರಸ್ತೆಯ ಜೂನಿಯರ್ ಕಾಲೇಜುಗಳಿಗೆ ಬೇಟಿ ನೀಡಿ ವಿದ್ಯಾರ್ಥಿಗಳಿಗೆ ಕೊರೋನಾ ಕುರಿತು ಜಾಗೃತಿ ಮೂಡಿಸಿದರು.
ಕಳೆದ ವರ್ಷ ಕೊರೋನಾ ಅಲೆಯಿಂದಾದ ನಷ್ಟವನ್ನು ಎಲ್ಲರೂ ನೋಡಿದ್ದೇವೆ. ಈಗ ಎರಡನೆಯ ಅಲೆ ಅತಿ ವೇಗವನ್ನು ಪಡೆದಿದ್ದು ಯಾವ ಸೂಚನೆ ಇಲ್ಲದೆ ಹಬ್ಬುತ್ತದೆ. ಶಾಲಾ ಮಕ್ಕಳು, ವರ್ತಕರು, ತರಕಾರಿ ಮಾರಾಟಗಾರರು ಸೇರಿದಂತೆ ಜಿಲ್ಲೆಯ ಪ್ರತಿಯೊಬ್ಬ ನಾಗರೀಕನೂ ಜಾಗೃತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಪೌರಯುಕ್ತ ಪಾಲಯ್ಯ ಮಾತನಾಡಿ, ಸಾರ್ವಜನಿಕರು, ಅಂಗಡಿ ಮಾಲೀಕರು ಮಾಸ್ಕ್ ಧರಿಸದಿದ್ದರೆ ಇಂದು ನಾವೇ ಮಾಸ್ಕ್ ನೀಡಿ ಜಾಗೃತಿ ಮೂಡಿಸುತ್ತೇವೆ. ನಾಳೆಯಿಂದ ದಂಡ ವಿಧಸಲಾಗುವುದು. ಈಗಿನಿಂದಲೇ ಜಾಗೃತರಾಗಿ ಈಗಾಗಲೇ ನಗರದಲ್ಲಿ ಕೋರೋನಾ ಅಲೆ ಪ್ರಾರಂಭವಾಗಿದೆ ಬೇರೆ ಊರುಗಳಿಂದ ಬರುವವರ ಬಗ್ಗೆ ಎಚ್ಚರಿಕೆ ವಹಿಸಲಾಗುವುದು. ಹಾಗೂ ಎಲ್ಲಾ ವಾರ್ಡಗಳಿಗೆ ಸೋಂಕು ಹರಡದಂತೆ ಸ್ಯಾನಿಟೈರ್ ಸಿಂಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದು , ಕಾಲೇಜುಗಳಿಗೂ ಸೋಂಕುನಿವಾರಕ ಸಿಂಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ.ರಮೇಶ್ ಗೌಡ, ನಗರಸಭೆ ಅರೋಗ್ಯ ಅಧಿಕಾರಿಗಳಾದ ಮಹಾಲಿಂಗಪ್ಪ, ದಾದಾಪೀರ್, ಗಣೇಶ ಹಾಗೂ ಪೋಲೀಸ್ ಸಿಬ್ಬಂದಿಗಳಾದ ವೆಂಕಟೇಶ, ಚಂದ್ರನಾಯ್ಕ, ಸಂತೋಷ್ ಕುಮಾರ್ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post