ಕಲ್ಪ ಮೀಡಿಯಾ ಹೌಸ್
ಸಾಗರ: ತಾಲೂಕಿನ ಕೋಗಾರು ಚನ್ನಗೊಂಡ ಗ್ರಾಮ ವ್ಯಾಪ್ತಿಯ ಕುಪ್ಪಡಿಯಲ್ಲಿ ಇಂದು ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಬಿಳ್ಕಾನಾಯ್ಕ ಎನ್ನುವವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 17.649 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಆರೋಪಿ ಬಿಳ್ಕನಾಯ್ಕ ಪರಾರಿಯಾಗಿದ್ದು, ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಸಂತೋಷ್, ಸಿಬ್ಬಂದಿಗಳಾದ ಗಣಪತಿ, ಮಹಬಲೇಶ್, ಕನ್ನಯ್ಯ ಕುಮಾರ್, ಬಸವರಾಜ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post