ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಲ್ಯಾಬ್‌ಗಳಲ್ಲಿ 24 ಗಂಟೆಯೊಳಗಾಗಿ ಸ್ವಾಬ್ ಟೆಸ್ಟ್ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲು ಸೂಚನೆ ನೀಡಲಾಗಿತ್ತು. ಆದರೂ ಕೆಲ ಲ್ಯಾಬ್‌ಗಳು ಐಸಿಎಂಆರ್ ಪೋರ್ಟಲ್‌ನಲ್ಲಿ ತಡವಾಗಿ ಪರೀಕ್ಷಾ ಫಲಿತಾಂಶವನ್ನು ಅಪ್ಲೋಡ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಯು ಸಂಖ್ಯೆಯನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಸ್ವಾಬ್ ಟೆಸ್ಟ್ ಲ್ಯಾಬ್‌ಗಳಿಗೆ ಬೀಗ ಮುದ್ರೆ ಹಾಕಿ ನೋಟೀಸ್ ಜಾರಿ ಮಾಡಲಾಗಿದೆ.

ಈ ಸಂಬಂಧ ಪಶ್ಚಿಮ ವಲಯ ವ್ಯಾಪ್ತಿಯ ಮೆಡಲ್ ಲ್ಯಾಬ್, ಆರತಿ ಲ್ಯಾಬ್, ಆರ್.ವಿ ಮೆಟ್ರೊಪಾಲಿಸ್ ಲ್ಯಾಬ್ ಹಾಗೂ ರಾಜರಾಜೆಶ್ವರಿ ನಗರ ವಲಯದ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜು ಲ್ಯಾಬ್ ಸೇರಿ 4 ಲ್ಯಾಬ್‌ಗಳಿಗೆ ನಿನ್ನೆ ಆರೋಗ್ಯಾಧಿಕಾರಿಗಳ ತಂಡವು ಭೇಟಿ ನೀಡಿ ಸ್ವಾಬ್ ಟೆಸ್ಟ್ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ತಡವಾಗಿ ಅಪ್ಲೋಡ್ ಮಾಡುತ್ತಿರುವ ಕಾರಣ ಶೋಕಾಸ್ ನೋಟೀಸ್ ನೀಡಿದ್ದು, ಪಶ್ಚಿಮ ವಲಯದ 2 ಲ್ಯಾಬ್‌ಗಳಾದ ಮೆಡಲ್ ಲ್ಯಾಬ್ ಹಾಗೂ ಆರತಿ ಲ್ಯಾಬ್ ಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















