ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಸಮಾಜ ಸೇವೆ ಮೂಲಕವೇ ನಗರದಲ್ಲಿ ಗುರುತಿಸಿಕೊಂಡಿದ್ದ ಸ್ನೇಹ ಜೀವಿ ಬಳಗದ ಎಸ್. ಸತೀಶ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಸತೀಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 5 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಸತೀಶ್ 32ನೇ ವಾರ್ಡ್ ಪಕ್ಷೇತರ ಅಭ್ಯರ್ಥಿಯಾಗಿರುವ ಪತ್ನಿ ಲತಾ, ಇಬ್ಬರು ಗಂಡು ಮಕ್ಕಳು, ತಂದೆ ಹಾಗು ಸಹೋದರನ್ನು ಹೊಂದಿದ್ದರು.
ಇವರ ಸಹೋದರ ಪೊಲೀಸ್ ಉಮೇಶ್ ಹಾಗೂ ಸಮಾನ ಮನಸ್ಕ ಗೆಳೆಯರನ್ನು ಸೇರಿಸಿಕೊಂಡು ಸ್ನೇಹ ಜೀವಿ ಬಳಗ ಎಂಬ ಒಳ್ಳೆಯ ವೇದಿಕೆಯೊಂದನ್ನು ಸೃಷ್ಠಿಸಿಕೊಂಡಿದ್ದ ಸತೀಶ್ ತಮ್ಮ ಮೃದು ಮನಸ್ಸು, ಆತ್ಮೀಯತೆಯಿಂದಲೇ ಎಲ್ಲರಿಗೂ ಆಪ್ತರಾಗಿದ್ದವರು.
ಸ್ನೇಹ ಜೀವಿ ಬಳಗದ ಮೂಲಕ ನಗರದಲ್ಲಿ ಹಲವಾರು ವರ್ಷಗಳಿಂದ ವಿವಿಧ ರೀತಿಯಲ್ಲಿ ಬಡವರಿಗೆ, ದೀನ ದಲಿತರಿಗೆ ನೆರವಾಗುವ ಮೂಲಕ ಜನರ ಮನೆ ಮಾನಸದಲ್ಲಿ ನೆಲೆಯಾಗಿದ್ದರು ಸತೀಶ್.
ಇವರ ನಿಧನದಿಂದಾಗಿ ಸ್ನೇಹ ಜೀವಿ ಬಳಗದ ಸದಸ್ಯರು, ಅಭಿಮಾನಿಗಳಲ್ಲಿ ದುಃಖ, ಶೋಕ ಮಡುಗಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post