ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ನಗರಸಭೆ ವತಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.
ನಗರದ ಮುಖ್ಯ ರಸ್ತೆ, ತಾಲೂಕು ಕಚೇರಿ, ಖಾಸಗಿ ಬಸ್ ನಿಲ್ದಾಣ, ಹಣ್ಣು ಮಾರ್ಕೆಟ್ ಸೇರಿದಂತೆ ಹಲವೆಡೆ ಸುಡು ಬಿಸಿಲು ಲೆಕ್ಕಿಸದೆ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡಿ, ಕೊರೋನಾ ಕುರಿತು ಎತ್ತೆಚ್ಚುಕೊಳ್ಳಬೇಕು. ಸೋಂಕು ವೇಗದ ಸ್ವರೂಪ ಪಡೆದಿದ್ದು, ನಾಗರೀಕರು ಹೆಚ್ಚು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಬಸ್‌ನಲ್ಲಿ ಪ್ರಯಾಣಿಸುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೋನಾ ಮಾರ್ಗಸೂಚಿಯನ್ನು ಪಾಲಿಸದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಸಿ.ಬಿ.ಜಯಲಕ್ಷ್ಮಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಜೈತುನ್ಬಿ, ಸದಸ್ಯರಾದ ವೀರಭದ್ರಯ್ಯ ಎಂ.ಜೆ.ರಾಘವೇಂದ್ರ, ಚಳ್ಳಕೆರೆ ಪ್ರಶಾಂತ ಶ್ರೀನಿವಾಸ್, ವೈ. ಪ್ರಮೋದ್ ನಗರಸಭೆ ಪೌರಯುಕ್ತ ಪಾಲಯ್ಯ, ನಗರಸಭೆ ಅರೋಗ್ಯ ಅಧಿಕಾರಿಗಳಾದ ಗಣೇಶ, ದಾದಾಪಿರ್ ಹಾಗೂ ಮುಖಂರಾದ ಎಚ್. ಎಸ್. ಸೈಯಾದ್ ಕೃಷ್ಣ ಇತರರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post