ಕಲ್ಪ ಮೀಡಿಯಾ ಹೌಸ್
ಸೊರಬ: ರಾಜ್ಯದಾದ್ಯಂತ ಕೋವಿಡ್ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ವೇಳೆಯಲ್ಲಿ ಪುರಸಭಾ ಸದಸ್ಯ ಪ್ರಸನ್ನ ಕುಮಾರ್ ದೊಡ್ಮನೆ ಅವರು ಜನಪ್ರತಿನಿಧಿಗಳಿಗೆಲ್ಲಾ ಮಾದರಿಯಾಗುವ ಕಾರ್ಯವೊಂದನ್ನು ಮಾಡಿದ್ದಾರೆ.
ಹೌದು… ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗುವ ದೃಷ್ಠಿಯಿಂದ ತಮ್ಮ ನಾಲ್ಕು ತಿಂಗಳ ಗೌರವಧನವನ್ನು ಸರ್ಕಾರಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಗದೆ ಪರದಾಡುತ್ತಿರುವ ದೃಶ್ಯ ಒಂದೆಡೆಯಾದರೆ, ಇನ್ನೊಂದೆಡೆ ಬಡವರ ಗೋಳು ಕೇಳೋರು ಗತಿ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಗೌರವಧನವನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಬಿಬಿಎಂಪಿ ಸದಸ್ಯರು ಹೀಗೆ ಎಲ್ಲಾ ಜನಪ್ರತಿನಿಧಿಗಳು ತಮಗೆ ಬರುವ ಗೌರವಧನವನ್ನು ಸರ್ಕಾರಕ್ಕೆ ನೀಡಿದರೆ ನೂರಾರು ಕೋಟಿ ರೂ. ಸಂಗ್ರಹವಾಗುತ್ತದೆ. ಇದನ್ನು, ಸಂಕಷ್ಟದಲ್ಲಿರುವ ಬಡವರಿಗೆ, ನಿರಾಶ್ರಿತರಿಗೆ ಆಹಾರ ಕಿಟ್’ಗಳನ್ನು ವಿತರಿಸಿದರೆ, ಸರ್ಕಾರದ ಮೇಲಿನ ಹೊರೆ ಕೊಂಚ ಕಡಿಮೆಯಾಗುತ್ತದೆ ಎಂದಿದ್ದಾರೆ.
ತಮ್ಮ 4 ತಿಂಗಳ ಗೌರವಧನ ಮೊತ್ತದ ಚೆಕ್ ಅನ್ನು ಸೊರಬ ಪ್ರಭಾರ ಮುಖ್ಯಾಧಿಕಾರಿ ರಮೇಶ್ ಅವರಿಗೆ ದೊಡ್ಮನೆ ಅವರು ಹಸ್ತಾಂತರಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post