ಕಲ್ಪ ಮೀಡಿಯಾ ಹೌಸ್
ಮುಂಬೈ: ನನ್ನ ದೇಹದಲ್ಲಿ ಕೊರೋನಾ ವೈರಸ್ ಪಾರ್ಟಿ ಮಾಡುತ್ತಿದೆ. ಅದನ್ನು ಪುಡಿಗಟ್ಟುತ್ತೇನೆ ಎಂದು ಕೊರೋನಾ ಸೋಂಕಿಗೆ ತುತ್ತಾಗಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಾಣಾವತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಇನ್ಟ್ರಾಗ್ರಾಂನಲ್ಲಿ ಬರೆದುಕೊಂಡಿರುವ ಅವರು, ಹಿಮಾಚಲದಿಂದ ಹಿಂದಿರುಗಿದ ನಂತರ ಕಣ್ಣು ಉರಿ, ಗಂಟಲು ನೋವಿನ ಜೊತೆಯಲ್ಲಿ ದೇಹದಲ್ಲಿ ಸುಸ್ತು ಕಾಣಿಸಿಕೊಂಡಿತು. ಇದರಿಂದಾಗಿ ಪರೀಕ್ಷೆ ಮಾಡಿಸಿಕೊಂಡಿದ್ದು, ನನಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದಿದ್ದಾರೆ.
ಕೊರೋನಾ ವೈರಸ್ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ. ಆದರೆ ನಾನು ಅದನ್ನು ಪುಡಿಗಟ್ಟಿ ಗೆದ್ದು ಬರುತ್ತೇನೆ. ಸದ್ಯ ನಾನು ಕ್ವಾರಂಟೈನ್’ನಲ್ಲಿ ಇದ್ದೇನೆ ಎಂದಿದ್ದಾರೆ.
ಕೊರೋನಾಗೆ ನಾವು ಹೆದರಿದರೆ ಅದು ನಮ್ಮನ್ನು ಹೆದರಿಸುತ್ತದೆ. ಧೈರ್ಯದಿಂದ ಇರಿ, ಧೈರ್ಯದಿಂದ ಎದುರಿಸಿ, ಬನ್ನಿ ಕೋವಿಡ್19 ಸೋಂಕನ್ನು ನಾಶಪಡಿಸೋಣ, ಹರ ಹರ ಮಹಾದೇವ್ ಎಂದು ಕರೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post