ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗುತ್ತಿರುವ ಸೋಂಕಿತರ ನೆರವಿಗೆ ಭದ್ರಾವತಿ ಮೂಲದ ವೈದ್ಯರೊಬ್ಬರು ಸದ್ದಿಲ್ಲದೇ ಸೇವಾ ಕಾರ್ಯ ಮಾಡುತ್ತಿದ್ದಾರೆ.
ಹೌದು… ಬೆಂಗಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಫಿಜಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಭದ್ರಾವತಿ ಮೂಲದ ಡಾ.ಆರ್.ಎನ್. ಪಣೇಶ್ವರ್ ಅವರು, ಕೋವಿಡ್ ಸೋಂಕಿತರಿಗೆ, ರೋಗ ಲಕ್ಷಣಗಳು ಇರುವ ಹಾಗೂ ಇಲ್ಲದಿರುವವರಿಗೂ ಸಹ ದೂರವಾಣಿ ಮೂಲಕ ಉಚಿತ ಸಲಹೆ ನೀಡುವ ಮೂಲಕ ಸ್ವರ್ಣ ಟ್ರಾವೆಲ್ಸ್ ಸಹಕಾರದಲ್ಲಿ ಯಾವುದೇ ಪ್ರಚಾರವಿಲ್ಲದೇ ಸೇವೆ ಮಾಡುತ್ತಿದ್ದಾರೆ.
ಈಗಾಗಲೇ ಸಲಹೆಗಳನ್ನು ನೀಡುತ್ತಿರುವ ಇವರು ಪ್ರತಿದಿನ 40 ಸೋಂಕಿತರಿಗೆ ಮಾರ್ಗದರ್ಶನ ಮಾಡುವುದಾಗಿ ಹೇಳಿದ್ದಾರೆ.
ಹೇಗೆ ಸಲಹೆ ಪಡೆಯುವುದು?
ಕೋವಿಡ್ ಸೋಂಕಿತರಾಗಿದ್ದು, ರೋಗ ಲಕ್ಷಣವಿದ್ದರೂ, ಇಲ್ಲದೇ ಇದ್ದರೂ ಡಾ.ಪಣೇಶ್ವರ್ ಅವರಿಂದ ಉಚಿತ ಸಲಹೆ ಪಡೆಯಬಹುದು. ನೀವು ದೂರವಾಣಿ ಕರೆಯ ಮೂಲಕ ನಿಮ್ಮ ವಿವರ ನೀಡಿ ನೋಂದಣಿ ಮಾಡಿಕೊಂಡರೆ ಸ್ವತಃ ವೈದ್ಯರೇ ಕರೆ ಮಾಡಿ ನಿಮ್ಮೊಂದಿಗೆ ಮಾತನಾಡುತ್ತಾರೆ.
ನೋಂದಣಿ ಹೇಗೆ?
94481 44697 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮೊದಲು ನಿಮ್ಮ ವಿವರ ನೋಂದಣಿ ಮಾಡಿಕೊಳ್ಳಬೇಕು. ಆನಂತರ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ವೈದ್ಯರು ಸಂಜೆ 5 ಗಂಟೆಯ ನಂತರ ಕರೆ ಮಾಡಿ, ಸೋಂಕಿತರೊಂದಿಗೆ ಮಾತನಾಡಿ, ಮೊಬೈಲ್ ಮೂಲಕವೇ ಎಲ್ಲ ವಿವರಗಳು, ವೈದ್ಯಕೀಯ ವರದಿಗಳನ್ನು ತರಿಸಿಕೊಂಡು ಮಾರ್ಗದರ್ಶನ ಮಾಡುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post