ಕಲ್ಪ ಮೀಡಿಯಾ ಹೌಸ್
ರಾಮನಗರ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿಯವರು ರಾಮನಗರ ಡಿಹೆಚ್‌ಓ ನಿರಂಜನ್ ಜೊತೆ ದೂರವಾಣಿಯ ಮೂಲಕ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಸಂಪೂರ್ಣ ವಿವರ ಪಡೆದುಕೊಂಡರು.
ದಿನೇ ದಿನೇ ಕೋವಿಡ್ ಸೋಂಕಿತರ ಕಾಳಜಿ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆಯೆಂಬ ದೂರುಗಳು ಹೆಚ್ಚಾಗುತ್ತಿದೆ. ಸಾಮಾನ್ಯ ಜನರಿಗೆ ಉತ್ತಮ ಚಿಕಿತ್ಸೆ ದೊರೆಯದೆ ಭಾರೀ ಯಾತನೆ ಅನುಭವಿಸುವಂತಾಗಿದೆ ಎಂಬ ದೂರುಗಳು ಹೆಚ್ಚಾಗುತ್ತಿದೆ. ಯಾವುದೇ ಕಾರಣಕ್ಕೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸೋಂಕಿತರ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡದಂತೆ DHO ನಿರಂಜನ್ ರವರಿಗೆ ಎಚ್ವರಿಕೆ ನೀಡಿದರು.
RCH ಡಾ.ಪದ್ಮಾರವರ ಮೇಲೆ ಮತ್ತು ನಿಮ್ಮ(ಡಿಹೆಚ್‌ಓ ನಿರಂಜನ್) ಮೇಲೆ ಹೆಚ್ಚೆಚ್ಚು ಜವಾಬ್ಧಾರಿ ಇದೆ. ಇಂತಹ ಸಂಧರ್ಭದಲ್ಲಿ ಉದಾಸೀನ ಮಾಡದೇ ಹೆಚ್ಚಿನ ಜವಾಬ್ದಾರಿಯಿಂದ ಜಿಲ್ಲೆ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ ಎಲ್ಲಿಯೂ ವೈಫಲ್ಯ ಕಾಣದಂತೆ ಕೋವಿಡ್ ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಬೇಕೆಂದು ಶಾಸಕಿ ಅನಿತಾ ಕುಮಾರಸ್ವಾಮಿ ತಾಕೀತು ಮಾಡಿದರು.
ಗ್ರಾಮೀಣ ಪ್ರದೇಶದ ಬಡವರ್ಗದ ರೈತಾಪಿ ಜನರು ಮತ್ತು ಮಧ್ಯಮವರ್ಗದ ಜನರು ಕೋವಿಡ್ ಸೋಂಕಿನಿಂದ ಹೆಚ್ಚು ಬಳಲುತ್ತಿದ್ದಾರೆ. ಭಯ, ಆತಂಕದಿಂದಲೇ ದಿನದೂಡುತ್ತಿರುವ ಇಂತಹ ಸಂಧರ್ಭದಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆಂಬ ಆತ್ಮವಿಶ್ವಾಸ ಹೆಚ್ಚಾಗುವ ರೀತಿಯಲ್ಲಿ ಸಮರ್ಪಕ ರೀತಿಯಲ್ಲಿ ಸರ್ಕಾರದ ವೈದ್ಯಕೀಯ ಸೌಲಭ್ಯ ದೊರಕಬೇಕು ಎಂದು ಡಿಹೆಚ್‌ಓ ನಿರಂಜನ್ ರಿಗೆ ಶಾಸಕರು ಸೂಚನೆ ನೀಡಿದರು.
RTPCR ವರದಿಗಳನ್ನ 24 ಗಂಟೆಯೊಳಗಾಗಿ ನೀಡಬೇಕೆಂಬ ಸರ್ಕಾರದ ಸೂಚನೆ ಇದೆ. ಆದರೂ RTPCR ವರದಿಗಳನ್ನ ನೀಡಲು ನಾಲ್ಕೈದು ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಕೋವಿಡ್ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗಲು ವಿಳಂಬವಾಗುತ್ತಿರುವುದರಿಂದ ಕೋವಿಡ್ ಸೋಂಕಿತರ ಸಾವು ನೋವು ಹೆಚ್ಚಾಗಲು ಕಾರಣವಾಗುತ್ತಿದೆ, ಜೊತೆಗೆ ಸೋಂಕು ಹೆಚ್ಚಾಗಿ ಹರಡಲು ಕಾರಣವಾಗುತ್ತಿದೆ. ಈ ಬಗ್ಗೆಯೂ ನೀವು (ಡಿಹೆಚ್‌ಓ) ಸಂಬಂಧಿಸಿದವರಿಗೆ ಕಠಿಣ ಸೂಚನೆ ನೀಡಿ RTPCR ವರದಿಗಳನ್ನ 24 ಗಂಟೆ ಒಳಗೆ ನೀಡಲು ಕ್ರಮವಹಿಸಬೇಕಾಗಿದೆ ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಗಳು ಎಷ್ಟಿವೆ, ವೆಂಟಿಲೇಟರ್ ಬೆಡ್ ಗಳು ಎಷ್ಟಿವೆ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಎಷ್ಟು ಬೆಡ್ ಗಳಿವೆ ಎಂಬ ನಿಖರವಾದ ಮಾಹಿತಿಯನ್ನ ಸಾರ್ವಜನಿಕವಾಗಿ ನೀವು ಪ್ರಕಟಣೆ ಹೊರಡಿಸಿ. ಕೋವಿಡ್ ಸೋಂಕಿತರು ಆಸ್ಪತ್ರೆಗಳಿಗೆ ಆಗಮಿಸಿದ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಉತ್ತಮ ಚಿಕಿತ್ಸೆ ಸಿಗದೆ ಹೆಚ್ಚು ಸಾವುಗಳಾಗಿವೆ ಎಂಬ ಭಯ, ಆತಂಕ ಜನರಲ್ಲಿದೆ. ಆದ್ದರಿಂದ ಖುದ್ದು ಡಿಹೆಚ್‌ಓ ಭೇಟಿ ನೀಡಿ RR ಆಸ್ಪತ್ರೆಯ ಆಢಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಸೂಕ್ತ ಚಿಕಿತ್ಸೆ ಕೋವಿಡ್ ಸೋಂಕಿತರಿಗೆ ಸಿಗವಂತೆ ಮಾಡಬೇಕು ಎಂದು ಡಿಹೆಚ್‌ಓ ನಿರಂಜನ್ ರವರಿಗೆ ಶಾಸಕರಾದ ಅನಿತಾ ಕುಮಾರಸ್ವಾಮಿಯವರು ಸೂಚನೆ ನೀಡಿದರು.
RCH ಪದ್ಮಾ ಮತ್ತು ನೀವು (ಡಿಹೆಚ್‌ಓ) ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಗುಣಮಟ್ಟದ ಚಿಕಿತ್ಸೆ ನೀಡುವತ್ತ ಗಮನಹರಿಸಿ. ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸಬೂಬು ಮಾತು, ಸಮರ್ಥನೆಗಳ ಮಾತು ಇಂತಹ ಸಂಧರ್ಭದಲ್ಲಿ ಅನವಶ್ಯಕ. ನಿಮ್ಮ ಜವಾಬ್ಧಾರಿ ಅರಿತುಕೊಂಡು ಕರ್ತವ್ಯ ನಿರ್ವಹಿಸಿ ಎಂದು ಡಿಹೆಚ್‌ಓ ನಿರಂಜನ್ ರಿಗೆ ಶಾಸಕರಾದ ಅನಿತಾ ಕುಮಾರಸ್ವಾಮಿಯವರು ಖಡಕ್ ಸೂಚನೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post