No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Thursday, July 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಕನ್ನಡದ ಸೇವಕ ಸೊರಬದ ‘ಸುರಭಿ’ ಶಹಾಬುದ್ದೀನ್ ಇನ್ನಿಲ್ಲ

kalpa News by kalpa News
May 20, 2021
in ಸೊರಬ
0
ಕನ್ನಡದ ಸೇವಕ ಸೊರಬದ ‘ಸುರಭಿ’ ಶಹಾಬುದ್ದೀನ್ ಇನ್ನಿಲ್ಲ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಸೊರಬ: ‘ಸುರಭಿ’ ಕಾವ್ಯನಾಮದಿಂದ ಪರಿಚಿತರಾಗಿದ್ದ ಹಿರಿಯ ಸಾಹಿತಿ ಸೈಯದ್ ಶಹಾಬುದ್ದೀನ್ (78) ಗುರುವಾರ ಪಟ್ಟಣದ ಮಾರ್ಕೆಟ್ ರಸ್ತೆಯ ಸ್ವಗೃಹದಲ್ಲಿ ವಯೋಸಹಜವಾಗಿ ನಿಧನ ಹೊಂದಿದರು.

ಉರ್ದು ಮಾತೃಭಾಷೆಯಾಗಿದ್ದರೂ ಕನ್ನಡ ಕಂಪನ್ನು ತಾಲ್ಲೂಕು ಮಾತ್ರವಲ್ಲದೇ ರಾಜ್ಯ ಸೇರಿದಂತೆ ಹೊರರಾಜ್ಯಗಳಲ್ಲೂ ಚೆಲ್ಲಿದ ಕೀರ್ತಿ ಸುರಭಿ ಶಹಾಬುದ್ದೀನ್ ಅವರದ್ದಾಗಿತ್ತು. ಪ್ರಾಥಮಿಕ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲಿ ಪಡೆದರೂ ಸಹ, ಮಾಧ್ಯಮಿಕ ಮತ್ತು ಪದವಿಯನ್ನು ಕನ್ನಡದಲ್ಲಿ ಅಧ್ಯಯನ ಮಾಡಿದ್ದರು. ಸದಾ ಮಕ್ಕಳೊಂದಿಗೆ ಬೆರೆಯುವ ಗುಣ ಹೊಂದಿದ್ದ ಅವರು ಮೊದಲ ಬಾರಿಗೆ ಲಾಕ್‌ಡೌನ್ ಜಾರಿಯಾಗಿ ಶಾಲಾ ಕಾಲೇಜ್‌ಗಳು ಮುಚ್ಚುತ್ತಿದ್ದಂತೆ ಮಾನಸಿಕವಾಗಿ ಕುಗ್ಗಿದ್ದರು ಎನ್ನುತ್ತಾರೆ ಅವರ ಕುಟುಂಬಸ್ಥರು. ಅವರು ಪತ್ನಿ, ಇಬ್ಬರ ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕನ್ನಡ ಭಾವಗೀತೆಗಳೊಂದಿಗೆ ಬೆಸೆದ ನಂಟು
ವೃತ್ತಿಯಲ್ಲಿ ಶಿಕ್ಷಕರಾಗದಿದ್ದರೂ ಸಹ, ಮಕ್ಕಳಿಗೆ ಕನ್ನಡ ಭಾವಗೀತೆಗಳನ್ನು ಕಲಿಸುವುದು ಮತ್ತು ಶಾಲಾ-ಕಾಲೇಜ್‌ಗಳಲ್ಲಿ ಕನ್ನಡ ಭಾವಗೀತೆಗಳನ್ನು ಹಾಡುತ್ತಲೇ ಬದುಕು ಕಟ್ಟಿಕೊಂಡಿದ್ದರು. 1964ರಿಂದಲೇ ಪ್ರಸಿದ್ಧ ಕವಿಗಳ ಕವಿತೆಗಳನ್ನು ಹಾಗೂ ಜಾನಪದ ಗೀತೆಗಳನ್ನು ಹಾಡುತ್ತಾ ಕನ್ನಡದ ಸೊಗಡನ್ನು ಮಕ್ಕಳಿಗೆ ಗಾಯನದ ಮೂಲಕ ತಿಳಿಸುವುದು ಹಾಗೂ ಅಂದಿನ ಕಾಲದಲ್ಲಿ ಶಾಲಾ-ಕಾಲೇಜ್‌ಗಳಲ್ಲಿ ನೀಡುವ ಕಾಣಿಕೆಯೇ ಅವರ ಜೀವನಾಧಾರವಾಗಿತ್ತು. ಯಾವುದೇ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡದಿದ್ದರೂ ಸಹ ಅವರಿಗೆ ಭಗವಂತ ಕಂಠ ಮಾಧುರ್ಯ ಕರುಣಿಸಿದ್ದನು.

ಸಾಹಿತ್ಯಕ್ಕೆ ಕೊಡುಗೆ
‘ಸುರಭಿ ಕಾವ್ಯ ನಾಮದಿಂದ ಪರಿಚಿತರಾಗಿದ್ದ ಶಹಾಬುದ್ದೀನ್ ಅವರು ಲವ್-ಇನ್-ಕಾಲೇಜ್ ಎಂಬ ನಾಟಕ, ನಂಬಲಾಗದ ಜಗತ್ತು ಎಂಬ ಕಾದಂಬರಿ, ಎರಡು ಜಡೆಯವಳು, ಪುಣ್ಯದ ಸಂಘ, ನನ್ನವಳು, ವರದಕ್ಷಿಣಿ ಸಮಸ್ಯೆ, ಹೆಣ್ಣಿನ ಕಣ್ಣೀರು, ಜಟಕಾ ಸೇರಿದಂತೆ ಅನೇಕ ಕವನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿನ ವಾಸ್ತವಿಕತೆಯನ್ನು ತೆರೆದಿಡುವ ಪ್ರಯತ್ನದಲ್ಲಿ ಮಹಿಳಾ ಶೋಷಣೆ, ಸಮಾನತೆಗಳು ಇವರ ಬರಹಗಳಲ್ಲಿ ಬಿಂಬಿತವಾಗಿದೆ.
ಪ್ರಶಸ್ತಿ ಮತ್ತು ಸನ್ಮಾನಗಳು
ಕನ್ನಡ ಭಾವಗೀತೆಗಳು, ಜನಪದಗೀತೆಗಳು ಹಾಗೂ ಪ್ರಸಿದ್ಧ ಕವಿಗಳ ಕವನಗಳನ್ನು ತಮ್ಮ ಕಂಠದ ಮೂಲಕ ಜೀವ ತುಂಬಿ ಹಾಡುತ್ತಿದ್ದರು. ಜೊತೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಇವರನ್ನು ಗುರುತಿಸಿ 2000ರಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. 2007ರಲ್ಲಿ ಶಿವಮೊಗ್ಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಸಾರ್ವಜನಿಕ ಸನ್ಮಾನ, 2011ರಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸನ್ಮಾನ ಸೇರಿದಂತೆ ಕೆಲ ಸಂಘ-ಸಂಸ್ಥೆಯವರು ಹಾಗೂ ಶಾಲಾ ಕಾಲೇಜ್‌ಗಳು ಗುರುತಿಸಿ ಸನ್ಮಾನಿಸಿವೆ. ಆದರೆ, ಸುರಭಿ ಶಹಾಬುದ್ದೀನ್ ತಮ್ಮ ಜೀವನವನ್ನೇ ಕನ್ನಡಕ್ಕಾಗಿ ಮೀಸಲಿಟ್ಟು ಸೇವೆ ಸಲ್ಲಿಸಿದರೂ, ಸರ್ಕಾರವಾಗಲೀ, ಯಾವುದೇ ಜನಪ್ರತಿನಿಧಿಗಳು ಎಲೆಮರೆಯ ಕಾಯಿಯಂತೆ ಕನ್ನಡದ ಕೆಲಸ ಮಾಡಿದವರನ್ನು ಗುರುತಿಸಲಿಲ್ಲ ಎಂಬುದು ‘ಸುರಭಿ ಶಹಾಬುದ್ದೀನ್’ ಅಭಿಮಾನಿಗಳಲ್ಲಿನ ಬೇಸರದ ಸಂಗತಿ.

(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaLockdownShimogaShivamoggaShivamogga NewsSorabaಉರ್ದುಉರ್ದು ಮಾಧ್ಯಮಮಲೆನಾಡು ಸುದ್ಧಿಮಾತೃಭಾಷೆಲಾಕ್‍ಡೌನ್ಶಿವಮೊಗ್ಗ ನ್ಯೂಸ್ಸುರಭಿಸೊರಬ
Share204Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಾಹನ ಜಖಂ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಎಸ್. ದತ್ತಾತ್ರಿ ಆಗ್ರಹ

Next Post

ಜಿಲ್ಲೆಯಲ್ಲಿಂದು 881 ಪಾಸಿಟಿವ್, 17 ಸಾವು, ಭದ್ರಾವತಿಯಲ್ಲಿ ಡಬಲ್ ಸೆಂಚುರಿ

kalpa News

kalpa News

Next Post
ದಾವಣಗೆರೆಯಲ್ಲಿಂದು 40 ಕೊರೋನಾ ಪಾಸಿಟಿವ್, 4 ಮಂದಿ ಬಿಡುಗಡೆ. 1 ಸಾವು

ಜಿಲ್ಲೆಯಲ್ಲಿಂದು 881 ಪಾಸಿಟಿವ್, 17 ಸಾವು, ಭದ್ರಾವತಿಯಲ್ಲಿ ಡಬಲ್ ಸೆಂಚುರಿ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!