ಕಲ್ಪ ಮೀಡಿಯಾ ಹೌಸ್
ಸಾಗರ: ಕೋವಿಡ್-19 ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ್ದು, ಇದರಿಂದ ಬಡವರಿಗೆ ಕೂಲಿಕಾರ್ಮಿಕರಿಗೆ ಆಹಾರ ಸಿಗದೇ ಕಷ್ಟಪಡುವಂತಾಗಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರವನ್ನು ಒದಗಿಸುವಂತೆ ಸರ್ಕಾರ ಆದೇಶಿಸಿತ್ತು. ಇದರ ಹಿನ್ನೆಲೆ ಸಾಗರದ ಜೋಗ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಾಗರ ಉಪ ವಿಭಾಗೀಯ ಅಧಿಕಾರಿ ಎಲ್. ನಾಗರಾಜ್, ನಗರಸಭೆ ಆಯುಕ್ತ ಹೆಚ್.ಕೆ. ನಾಗಪ್ಪ, ನಗರಸಭೆ ಪರಿಸರ ಅಭಿಯಂತರು ಕೆ. ಮದನ್, ನಗರಸಭೆ ಅಧ್ಯಕ್ಷೆ ಮಧುರ ಶಿವಾನಂದ್, ನಗರಸಭಾ ಉಪಾಧ್ಯಕ್ಷ ವಿ. ಮಹೇಶ್, ನಗರಸಭೆಯ ಸರ್ವ ಸದಸ್ಯರು, ನಗರಸಭೆ ಅರೋಗ್ಯ ನಿರೀಕ್ಷಕ ಶೈಲೇಶ್, ನಗರಸಭೆ ಕಿರಿಯ ಆರೋಗ್ಯ ನಿರಕ್ಷಕಿ ರಚನಾ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















