ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಕೊರೋನ ಮುಂಜಾಗ್ರತೆಯಾಗಿ ಕೋವಿಡ್ ನಿರೋಧಕ ಔಷಧ ಕಿಟ್’ಗಳನ್ನು ವಿತರಿಸಲಾಯಿತು.
ಶಿವಮೊಗ್ಗದ ಹಿರಿಯ ನರರೋಗ ತಜ್ಞ ಹಾಗೂ ಹೆಲ್ಪಿಂಗ್ ಹ್ಯಾಂಡ್ಸ್ ಸಂಚಾಲಕ ಡಾ.ಶಿವರಾಮಕೃಷ್ಣನ್ ಅವರು ಈ ಕಿಟ್’ಗಳನ್ನು ನೀಡಿದರು.
ಮೊದಲಿಗೆ ಮಹಾತ್ಮ ಗಾಂಧಿ ಟ್ರಸ್ಟ್’ನ ನಿರ್ದೇಶಕ ಕೆ.ಸಿ. ಬಸವರಾಜ್ ಮಾತನಾಡಿ, ಕೊರೋನಾ ವಾತಾವರಣದಲ್ಲಿ ಸಮಾಜದ ಶ್ರಮಿಕರಿಗೆ ಕಿಟ್’ಗಳನ್ನು ನೀಡುವುದರಿಂದ ದೈನಂದಿನ ಕೆಲಸ ಮಾಡುವಾಗಲೇ ಕೊರೋನಾ ನಿರೋಧಕ ಔಷಧ ಸೇವಿಸಿ ಜಾಗೃತರಾಗಲು ಸಹಾಯವಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post