ಕಲ್ಪ ಮೀಡಿಯಾ ಹೌಸ್
ಸಾಗರ: ಲಾಕ್ ಡೌನ್ ಪ್ರತಿಯೊಂದು ಜೀವ ರಾಶಿಗೂ ನಷ್ಟವನ್ನುಂಟುಮಾಡುತ್ತದೆ ಇತ್ತ ಜೀವನ ನಡೆಸಲು ಕೂಡ ತೊಂದರೆ ಉಂಟಾಗುತ್ತಿರುವ ಪರಿಸ್ಥಿತಿಗೆ ಸಾಮಾನ್ಯ ಜನ ಬಂದಿದ್ದಾರೆ.
ಇದೀಗ ರೈತನೂ ಕೂಡ ಸಂಕಷ್ಟಕ್ಕೀಡಾಗುವಂತೆ ಪರಿಸ್ಥಿತಿ ಎದುರಾಗಿದೆ ಅಂತಹ ಮನಕಲುಕುವ ಘಟನೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಚನ್ನಶೆಟ್ಟಿಕೊಪ್ಪ ಗ್ರಾಮದ ರೈತನಾದ ಅರುಣ್ ಹರಟೆ ಅವರದು 2 ಎಕರೆ ಜಮೀನಿನಲ್ಲಿ ಬೆಳೆದು ಬಂದಂತಹ ಅನಾನಸ್ ಮಾರಾಟವಾಗದೆ ಲಾಕ್ ಡೌನ್ ಎಫೆಕ್ಟ್ ನಿಂದ ಕೊಳ್ಳುವವರು ಇಲ್ಲದೆ ಗಿಡದಲ್ಲೇ ಹಾಳಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇವರು ಇದುವರೆಗೂ 4ಲಕ್ಷ ಬಂಡವಾಳವನ್ನು ಬೆಳೆ ಬೆಳೆಯಲು ಹಾಕಿದ್ದು ಇದೀಗ ಲಾಭವೂ ಇಲ್ಲದೆ ಬಂಡವಾಳವಿಲ್ಲದೆ ರೈತ ಆಕಾಶದತ್ತ ಮುಖ ಮಾಡಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾರಾದರೂ ಮಾರಾಟಗಾರರು ಅನಾನಸ್ಸನ್ನು ತೆಗೆದುಕೊಂಡು ಹೋಗಿ ಬಂದಷ್ಟು ಹಣವನ್ನಾದರೂ ನೀಡಿ ಎಂದು ಅಂಗಲಾಚುತ್ತಿರುವ ದೃಶ್ಯ ಮಾತ್ರ ಎಲ್ಲರನ್ನೂ ಮನಕಲಕುವಂತಿತ್ತು.
ವರದಿ : ಪವನ್ ಕುಮಾರ್ ಕಠಾರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post