ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನ ಲಾಕ್‌ಡೌನ್‌ನ ಈ ಸಂಕಷ್ಟದ ಸಮಯದಲ್ಲಿ ಭದ್ರಾವತಿಯ ಈ ಯುವ ಉದ್ಯಮಿ ಸಯ್ಯದ್ ಇಮ್ರಾನ್ ಅವರು, ಗ್ರಾಮೀಣ ಭಾಗದಲ್ಲಿ ಸದ್ದಿಲ್ಲದೆ ಸೇವೆ ಮಾಡುತ್ತಾ ಸಾರ್ಥಕತೆ ಮೆರೆಯುತ್ತಿದ್ದಾರೆ.
ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಬಳಿಯಿರುವ ಎಸ್‌ಎಲ್ ಭದ್ರಾವತಿ ಪ್ರಿಮಿಯಮ್ ಫ್ಯುಯಲ್ಸ್ ಬಂಕ್, ಇಂಡಿಯನ್ ಸಾಮಿಲ್ ಮತ್ತು ಇಂಡಸ್ ವುಡ್ ಇಂಡಸ್ಟ್ರೀಸ್ ಹಾಗೂ ಸ್ಮಾರ್ಟ್ ಹೆಡ್ಸ್ ಮಾಲೀಕರಾದ ಇವರು, ಭದ್ರಾವತಿಯ ಗ್ರಾಮೀಣ ಪ್ರದೇಶಗಳಲ್ಲಿ ಫುಡ್‌ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ.
ಅಂತರಗಂಗೆ, ನೆಹರೂ ನಗರ, ಸಾದತ್ ಕಾಲೋನಿ, ಗೌರಾಪುರ, ಸೌಹಳ್ಳಿ, ರಂಗನಾಥಪುರ, ಬಸವನಗುಡಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ 1000ಕ್ಕೂ ಅಧಿಕ ರೇಷನ್ ಕಿಟ್ ಹಾಗೂ ಅಷ್ಟೇ ಪ್ರಮಾಣದ ತರಕಾರಿ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ.
ಹಲವು ದಿನಗಳಿಂದ ಈ ಕಾರ್ಯವನ್ನು ಮಾಡುತ್ತಿರುವ ಇವರು, ಯಾವುದೇ ರೀತಿಯ ಪ್ರಚಾರ ಬಯಸದೆ ಸೇವೆಯಲ್ಲಿಯೇ ಸಾರ್ಥಕತೆ ಕಾಣುತ್ತಿದ್ದಾರೆ. ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಕೊರೋನಾದಿಂದಾಗುವ ತೊಂದರೆಯ ಅರಿವು ಪೂರ್ಣ ಪ್ರಮಾಣದಲ್ಲಿಲ್ಲ. ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತು ಖರೀದಿಗೆ ನಗರಪ್ರದೇಶಕ್ಕೆ ಆಗಮಿಸಿ, ಇಲ್ಲಿನ ಜನಜಂಗುಳಿ ನಡುವೆ ಖರೀದಿ ಮಾಡಿ ವಾಪಾಸ್ ತೆರಳಿದಂತಹ ಸಂದರ್ಭದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ತಡೆಯುವುದು ನಮ್ಮ ಉದ್ದೇಶ ಹೀಗಾಗಿ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳ ಜೊತೆಯಲ್ಲಿ ಒಳಭಾಗಗಳಲ್ಲೂ ಇರುವ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಕೊರೋನಾ ಲಾಕ್‌ಡೌನ್ ಮುಕ್ತಾಯವಾಗುವವರೆಗೂ ನಗರಪ್ರದೇಶಕ್ಕೆ ಆಗಮಿಸದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡುತ್ತಿದ್ದೇವೆ ಎಂದರು.
ಬಿಇ ಪದವೀಧರರಾದ ಇವರು ತಮ್ಮ ವ್ಯವಹಾರಗಳ ಜೊತೆ ಜೊತೆಯಲ್ಲೇ ನಮಗೆ ಎಲ್ಲವನ್ನೂ ನೀಡಿರುವ ಸಮಾಜಕ್ಕೆ ನಾವು ಏನಾದರೂ ಕೊಡುಗೆ ನೀಡಬೇಕು ಎಂಬುದು ನಮ್ಮ ಆಶಯ.
ಪ್ರಮುಖವಾಗಿ ಇಂತಹ ತುರ್ತು ಸಂದರ್ಭಗಳಲ್ಲಿ ಅಗತ್ಯ ಇರುವವರಿಗೆ ನೆರವಾಗುವುದು ಮುಖ್ಯವಾಗಿದೆ. ಹೀಗಾಗಿ ಈ ಸೇವೆ ಮಾಡುತ್ತಿದ್ದು, ಇದನ್ನು ಮುಂದಿನ ದಿನಗಳಲ್ಲಿಯೂ ಮುಂದುವರೆಸುತ್ತೇವೆ ಎಂದರು.
ಸಾವಿರಾರು ಸಂಖ್ಯೆಯಲ್ಲಿ ಫುಡ್ ಕಿಟ್ ಹಾಗೂ ತರಕಾರಿ ಕಿಟ್‌ಗಲನ್ನು ವಿತರಿಸುವ ಅವರು, ಯಾರಿಂದಲೂ ಒಂದುರೂ. ಸಹ ಪಡೆದುಕೊಂಡಿಲ್ಲ. ತಮ್ಮ ಸ್ವಂತ ಹಣವನ್ನು ವ್ಯಯಿಸಿ, ಯಾವುದೇ ರೀತಿಯ ಭೇದಭಾವ ಇಲ್ಲದೆ ಸಂಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ರಚಿಸಿ ಆಮೂಲಕ ನಿರಂತರವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಆಶಯವನ್ನು ಸಹ ಅವರು ವ್ಯಕ್ತಪಡಿಸಿದ್ಧಾರೆ.
ವಿತರಣೆಗೆ ಇವರು ವಿತರಿಸುತ್ತಿರುವ ಫುಡ್‌ಕಿಟ್‌ಗಳನ್ನು ಸಿದ್ಧಪಡಿಸುವ ಹಾಗೂ ಮನೆಮನೆಗೆ ತಲುಪಿಸುವ ಕಾರ್ಯಕ್ಕೆ ಇವರ ಸಿಬ್ಬಂದಿಗಳಾದ ಕಿರಣ್ ಗೌಡ, ವಿನಯ್ ವರ್ಮಾ, ಮೈಲಾರಪ್ಪ, ಅಲ್ಲಾವುದ್ಧಿನ್, ಸಿರಾಜ್ ತಾಜ್, ಎಲ್. ಗೌತಮಿ , ಮಂಜುನಾಥ್ ಜಿ.ಎಂ., ಶಹೀರ್ ಅವರುಗಳು ಕೈಜೋಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post