ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕುಮಾರ ಕಂಪನಿಯ ನಾಟಕ ಕಲಾವಿದರು ನಾಟಕ ಪ್ರದರ್ಶನವಿಲ್ಲದೆ ಪಡೆದಾಡುವಂತಾಗಿರುವ ಹಿನ್ನೆಲೆ ಕಲಾವಿದರಿಗೆ ಆಹಾರ್ ಕಿಟ್ ವಿತರಿಸುತ್ತಿದ್ದೇವೆ ಎಂದು ನಗರಸಭೆ ಸದಸ್ಯ ಮಲ್ಲಿಕಾರ್ಜನ್ ಹೇಳಿದರು.
ನಗರದ ಬಳ್ಳಾರಿ ಕರ್ನಾಟಕ ಬ್ಯಾಂಕ್‌ನ ಸಮೀಪ ನಾಟಕ ಕಂಪನಿಯ ಕಲಾವಿದರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೋನಾ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಇದರಿಂದ ನಗರದಲ್ಲಿ ಹಲವು ದಿನಗಳಿಂದ ಕುಮಾರ ಸ್ವಾಮಿ ನಾಟಕ ಕಂಪನಿ ಪ್ರದರ್ಶನಕ್ಕೆ ಅವಕಾಶವಿಲ್ಲದೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನ ಮನಗಂಡು ಚಳ್ಳಕೆರೆ ಪೋಲಿಸ್ ಇನ್ಸಪೇಕ್ಟರ್ ಜೆ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಆಹಾರ ಧಾನ್ಯದ ಕಿಟ್ ನೀಡಲಾಗುತ್ತಿದೆ ಎಂದರು.
ಚಳ್ಳಕೆರೆ ಪೋಲಿಸ್ ಇನ್ಸಪೇಕ್ಟರ್ ಜೆ. ತಿಪ್ಪೇಸ್ವಾಮಿ ಮಾತನಾಡಿ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಉತ್ತಮವಾದ ಕಾರ್ಯವನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಲವು ದಿನಗಳಿಂದ ವೆಂಕಟೇಶ ನಗರ, ಅಬಿಷೇಕ್ ನಗರದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿದ್ದು, ಈಗ ಕುಮಾರ ಸ್ವಾಮಿ ನಾಟಕ ಕಂಪನಿ ಕಲಾವಿದರಿಗೆ ಆಹಾರ ಧಾನ್ಯ ನೀಡಿರುವುದು ಉತ್ತಮವಾದ ಕಾರ್ಯವಾಗಿದೆ. ನಗರದಲ್ಲಿವ ದಾನಿಗಳು ಈ ನಾಟಕ ಕಂಪನಿಯ ಕಲಾವಿದರ ನೇರವಿಗೆ ಬರಬೇಕಿದೆ ಎಂದರು.
ಈ ಸಂದರ್ಭಧಲ್ಲಿ ಸಿ.ಟಿ. ರಂಗಸ್ವಾಮಿ, ಪೊಲೀಸ್ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ರವಿ, ಮಂಜುನಾಥ, ವಸಂತಕುಮಾರ್, ಚಂದ್ರನಾಯ್ಕ್ ಹಾಗೂ ಶ್ರೀಕುಮಾರಸ್ವಾಮಿ ನಾಟಕ ಕಲಾವಿದರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post