ಕಲ್ಪ ಮೀಡಿಯಾ ಹೌಸ್
ಗುಜರಾತ್: ದೇಶದಾದ್ಯಂತ ಕೊರೋನಾ ವೈರಸ್ ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಭಾರತೀಯರಿಗೆ ಲಸಿಕೆ ನೀಡುತ್ತಿದೆ. ಆದರೆ, ಇಲ್ಲೊಂದು ಕಡೆ ಸತ್ತವರ ಹೆಸರಲ್ಲೂ ಸಹ ಲಸಿಕೆ ನೀಡಿಕೆಗೆ ಮುಂದಾಗಿರುವುದು ಶಾಕ್ ತಂದಿದೆ.
ಗುಜರಾತ್’ನಲ್ಲಿ ಹರದಾಸ್ ಭಾಯ್ ಕರಿಂಗಿಯಾ ಎಂಬ ವ್ಯಕ್ತಿ 2018ರಲ್ಲೇ ಮರಣ ಹೊಂದಿದ್ದಾನೆ. ಆತ ಸತ್ತಿರುವ ಮರಣ ಪ್ರಮಾಣ ಪತ್ರವೂ ಕುಟುಂಬಸ್ಥರ ಬಳಿ ಇದೆ. ಕರಿಂಗಿಯಾ ಅವರಿಗೆ ಲಸಿಕೆ ನೀಡಲಾಗಿದೆ ಎಂದುಮೇ 3ರಂದು ಮನೆಯವರ ಮೊಬೈಲ್ ಗೆ ಮೆಸೇಜ್ ಜೊತೆಗೆ ಲಸಿಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ.
ಇದನ್ನು ನೋಡಿ ಮನೆಯವರು ಶಾಕ್ ಆಗಿದ್ದಾರೆ. ಮಾಧ್ಯಮದವರಿಗೆ ಮರಣ ಪ್ರಮಾಣಪತ್ರವನ್ನು ತೋರಿಸಿ, ಇದು ಹೇಗೆ ಸಾಧ್ಯ ಎಂಬುದೆ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಗುಜರಾತ್’ನಲ್ಲಿ ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಅಂದರೆ ದಾಹೋದ್’ನ ನರೇಶ್ ಎಂಬುವವರಿಗೂ ಮೆಸೇಜ್ ಬಂದಿತ್ತು. ಅವರ ತಂದೆಗೆ ಲಸಿಕೆ ನೀಡಲಾಗಿದೆ ಎಂದು. ಆದರೆ ಅವರ ತಂದೆ 2011 ರಲ್ಲೆ ನಿಧನರಾಗಿದ್ದರಂತೆ.
ಸದ್ಯ ಎಲ್ಲೆಲ್ಲೂ ವ್ಯಾಕ್ಸಿನ್’ಗೆ ಅಭಾವ ಉಂಟಾಗಿದ್ದು, ಈ ಮಧ್ಯೆ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಲ್ಲದೆ ಇರುವವರು ಲಸಿಕೆಯ ಫಲಾನುಭವಿಗಳಾಗುತ್ತಿರುವುದು ಹೇಗೆ ಎಂಬ ಅನುಮಾನಗಳು ಕಾಡುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post