“ನುಂಗಿಯಾಯಿತು, ನುಂಗಿಯಾಯಿತು, ನುಂಗುವಷ್ಟು ವಿಷವನ್ನು ದೇಶ ನುಂಗಿಯಾಯಿತು. ಇನ್ನು ವಿಷ ನುಂಗಲು ಹೊಟ್ಟೆಯಲ್ಲಿ ಸ್ಥಳವಿಲ್ಲ. ಮತ್ತಷ್ಟು ವಿಷವೂಡಿದರೆ ಆ ವಿಷ ಹೊರ ಬಂದೀತು, ಹೊರ ಬರುವಾಗ ವಿಷವಾಗಿ ಅಲ್ಲ ಬೆಂಕಿಯಾಗಿ ಬಂದೀತು, ಹೊರಬರುವಾಗ ಕೇವಲ ವಿಷವಾಗಿ ಅಲ್ಲ ಬೆಂಕಿಯಾಗಿ ಬಂದೀತು, ವಿಷವೂಡಿದವರನ್ನ ದಹಿಸೀತು.”
ಇದು ಉರಿ ದಾಳಿಗೆ ಪ್ರತಿಯಾಗಿ ನಮ್ಮ ದೇಶ ನಮ್ಮ ಸೇನೆ ಮಾಡಿದ ಪ್ರತಿ ದಾಳಿಗೆ ಕೊಡಬಹುದಾದ ವ್ಯಾಖ್ಯಾನ. ಇದಕ್ಕೆ ಸಾತ್ವಿಕ ಕ್ರೋಧ ಅಂತ ಹೆಸರು. ಸಹಿಸಿ ಸಹಿಸಿ ಸಹಿಸಿ ಸಹಿಸುವಷ್ಟು ಸಹಿಸಿ ಮತ್ತೂ ಮೀರಿ ಪೀಡೆಯಾದಾಗ ಬರುವ ಕ್ರೋಧಕ್ಕೆ ಸಾತ್ವಿಕ ಕ್ರೋಧ ಅಂತ ಹೆಸರು. ನಮ್ಮ ದೇಶ ಪಾಕಿಸ್ಥಾನದ ಮತ್ತು ಉಗ್ರಗಾಮಿಗಳ ಕಿರುಕುಳವನ್ನ ಎಷ್ಟೋ ಕಾಲದಿಂದ ಸಹಿಸ್ತಾ ಬಂದಿದೆ, ತಕ್ಕ ಪ್ರತ್ಯುತ್ತರವನ್ನ ಈಗ ನೀಡಿದೆ. ನಮ್ಮ ದೇಶದ ಶಾಂತಿಯನ್ನು, ಸುರಕ್ಷೆಯನ್ನು ಕಾಯ್ದುಕೊಳ್ಳುವಲ್ಲಿ ನಮ್ಮ ಸೈನಿಕರು ಗಡಿಯಲ್ಲಿ ತೋರುವ ಪರಾಕ್ರಮಕ್ಕೆ ಶ್ರೀರಾಮನ ಮತ್ತು ಶ್ರೀರಾಮಚಂದ್ರಾಪುರಮಠದ ಸಂಪೂರ್ಣವಾದ ಆಶೀರ್ವಾದ ಇದೆ. ನಮ್ಮ ಸೇನೆ ನಮ್ಮ ಹೆಮ್ಮೆ. ಹರೇರಾಮ.
ದೇಶ ರಕ್ಷಿಸುವ ಸೈನಿಕರಿಗೆ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾ
Discussion about this post