ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ‘ಕನ್ನಡಪ್ರಭ’ ಪತ್ರಿಕೆಯ ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮತ್ತು ಲೇಖಕಿ ಲತಾ ಯಡಗೆರೆ ದಂಪತಿ ತಮ್ಮ ಮಗಳು ಅನನ್ಯ ಅವರ ಹುಟ್ಟುಹಬ್ಬ ಸಂಭ್ರಮವನ್ನು ಸಂಕಷ್ಟದಲ್ಲಿರುವ ಪತ್ರಿಕಾ ಮತ್ತು ಇತರೇ ವೃತ್ತಿಯಲ್ಲಿರುವವರಿಗೆ ಗುರುವಾರ ಆಹಾರ ಕಿಟ್‌ಗಳ ನೀಡುವ ಮೂಲಕ ಆಚರಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ಅಧಿಕಾರಿ ಶಫಿ ಸಾದುದ್ದೀನ್ ಮಾತನಾಡಿ, ಕೊರೋನಾ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಅನೇಕರು ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಆಹಾರದ ಕಿಟ್ ವಿತರಿಸುತ್ತಿರುವುದು ನಿಜಕ್ಕೂ ಮಾದರಿ. ಕಷ್ಟದ ಸಂದರ್ಭದಲ್ಲಿ ಸ್ಪಂದಿಸಬೇಕಾಗಿದ್ದು ಮಾನವ ಧರ್ಮ. ಈ ನಿಟ್ಟಿನಲ್ಲಿ ಪತ್ರಕರ್ತ ಗೋಪಾಲ್ ಯಡಗೆರೆ ಅವರು ತಮ್ಮ ಕ್ಷೇತ್ರದ ಸಹೋದ್ಯೋಗಿಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಇದು ಇನ್ನಷ್ಟು ಮಂದಿಗೆ ಸೂರ್ತಿಯಾಗಲಿ ಎಂದು ಆಶಿಸಿದರು.
ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯಹಸ್ತ ಚಾಚಿರುವುದು ಅನುಕರಣೀಯ. ಗೋಪಾಲ್ ಯಡಗೆರೆ ಕಾರ್ಯ ಎಲ್ಲರಿಗೂ ಸ್ಛೂರ್ತಿ ನೀಡಲಿ. ದೇವರು ಅವರಿಗೆ ಇನ್ನಷ್ಟು ಸಹಾಯ ಮಾಡುವ ಶಕ್ತಿ ಕರುಣಿಸಲಿ ಎಂದು ಹೇಳಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಹಲವರ ಬಳಿ ಹಣ ಇರುತ್ತದೆ. ಆದರೆ, ದಾನ ಮಾಡುವ ಮನಸ್ಸು ಇರುವುದಿಲ್ಲ. ಇನ್ನು ಕೆಲವರು ಸೇವೆಯೇ ತಮ್ಮ ಜೀವನದ ಗುರಿ ಎಂದು ಭಾವಿಸಿ ಕೈಲಾದ ಸಹಾಯಕ್ಕೆ ಮುಂದಾಗುತ್ತಾರೆ. ಆ ಸಾಲಿಗೆ ಪತ್ರಕರ್ತ ಗೋಪಾಲ್ ಯಡಗೆರೆ ಸೇರುತ್ತಾರೆ ಎಂದರು.
ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಮಗಳ ಹುಟ್ಟುಹಬ್ಬದ ಸಂಭ್ರವನ್ನು ವೈಭವವಾಗಿ ಆಚರಿಸುವ ಬದಲು ಕೊರೋನಾದಿಂದ ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡವುದು ಮತ್ತು ಪತ್ರಿಕಾ ವೃತ್ತಿಯಲ್ಲಿ ಇರುವವರ ಸಂಕಷ್ಟಕ್ಕೆ ಜೊತೆಯಾಗಿ ನೆರವಾಗುವುದು ಇಂದಿನ ಅನಿವಾರ್ಯತೆ ಎಂಬ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿದ್ದೇನೆ. ಕೊರೋನಾ ಸಂಕಷ್ಟದ ಸೇವೆಯಲ್ಲಿ ತಾವು ಕೂಡ ಭಾಗಿಯಾಗಬೇಕು ಎಂಬ ಹಂಬಲ ಇತ್ತು. ಹೀಗಾಗಿ ತಮ್ಮ ಮಿತಿಯಲ್ಲಿ ಸ್ಪಂದಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿ.ಆರ್. ಎಂಟರ್ ಪ್ರೈಸಸ್ ವ್ಯವಸ್ಥಾಪಕಿ ಲತಾ ಯಡಗೆರೆ, ಜಿ.ಆರ್. ಎಂಟರ್‌ಪ್ರೈಸಸ್ ಮ್ಯಾನೇಜರ್ ಸುರೇಶ್ ಉಮಾರಾಣಿ, ಪತ್ರಕರ್ತರಾದ ಹುಲಿಮನೆ ತಿಮ್ಮಪ್ಪ, ಚಂದ್ರಹಾಸ್, ವೈದ್ಯನಾಥ್, ನಾಗರಾಜ ನೇರಿಗೆ, ಶಾಂತಕುಮಾರ್, ಅರವಿಂದ್, ಮೋಹನ್, ಮುರಳೀಧರ್, ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post