ಕಲ್ಪ ಮೀಡಿಯಾ ಹೌಸ್
ಕೇರಳ: ಕೊಲ್ಲಂ ಜಿಲ್ಲೆಯ ಸಾಸ್ತಂಕೋಟಾ ಬಳಿಯ ಸಾಸ್ತಮ್ನಾಡ ಎಂಬಲ್ಲಿ ಯುವ ವೈದ್ಯೆಯೊಬ್ಬಳು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆಗೂ ಮುನ್ನ ತನಗೆ ನೀಡಿದ ಕಿರುಕುಳದ ಬಗ್ಗೆ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯನ್ನು ವಿಸ್ಮಯ.ವಿ.ನೈಯರ್ ಎಂದು ಗುರುತಿಸಲಾಗಿದ್ದು, ೨೦೨೦ರ ಮೇ ತಿಂಗಳಲ್ಲಿ ಆರ್‌ಟಿಓ ಅಧಿಕಾರಿ ಎಸ್.ಕಿರಣ್‌ಕುಮಾರ್ ಎಂಬವರ ಜೊತೆ ವಿವಾಹವಾಗಿದ್ದ ವಿಸ್ಮಯ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ವಿದ್ಯಾರ್ಥಿನಿಯಾಗಿದ್ದರು. ದಂಪತಿ ಕೇರಳದ ಕೊಲ್ಲಂನಲ್ಲಿ ವಾಸಿಸುತ್ತಿದ್ದರು.

ಆದರೆ ಮದುವೆ ನಂತರ ಪತಿ ಕಿರಣ್ ಕುಮಾರ್ ವಿಸ್ಮಯ ಅವರಿಗೆ ಹಲವು ಬಾರಿ ಹೊಡೆದಿದ್ದು, ವರದಕ್ಷಿಣೆ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ತನ್ನ ಸೋದರ ಸಂಬಂಧಿಯೊಬ್ಬರಿಗೆ ವಿವರಿಸಿದ್ದಾಳೆ.
ಪತಿಯ ಚಿತ್ರ ಹಿಂಸೆಯನ್ನು ಸಹಿಸಲಾಗುತ್ತಿಲ್ಲ, ವರದಕ್ಷಿಣೆ ಬೇಕೆಂದು ನಿತ್ಯ ಹಿಂಸೆ ನಿಡುತ್ತಿದ್ದಾನೆ ಎಂದು ಸಾವಿಗೂ ಮುನ್ನ ವಿಸ್ಮಯ ತನ್ನ ಸೋದರ ಸಂಬಂಧಿ ಜೊತೆ ನೋವನ್ನು ತೋಡಿಕೊಂಡಿದ್ದಾರೆ. ಕಿರುಕುಳ ಸಹಿಸಲಾಗುತ್ತಿಲ್ಲ. ಬಹುಶಃ ಇದೇ ಕೊನೆಯ ಮೆಸೇಜ್ ಆಗಬಹುದು ಎಂದು ಭಾನುವಾರ ರಾತ್ರಿ ಸಹ ಸೋದರಸಂಬಂಧಿ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಫೋಟೋಗಳನ್ನು ಹಂಚಿಕೊಂಡು ತಮ್ಮ ದುಃಖವನ್ನು ಹೇಳಿಕೊಂಡಿದ್ದಳು. ಮರುದಿನ ಬೆಳಗ್ಗೆ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮದುವೆ ಸಮಯದಲ್ಲಿ ಒಂದು ಎಕರೆ ಭೂಮಿ, ಒಂದು ಕಾರನ್ನು ನೀಡಲಾಗಿದ್ದರೂ ಅಳಿಯನ ಹಣದಾಹ ಕಡಿಮೆಯಾಗಿರಲಿಲ್ಲ ಮಗಳ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು. ಇದೀಗ ಆರೋಪಿ ಕಿರಣ್ ಕುಮಾರ್‌ನನ್ನು ಬಂಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















