ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಬೆಳಗ್ಗೆ ನಗರದ 100 ಅಡಿ ರಸ್ತೆ ಬ್ಲಡ್ ಬ್ಯಾಂಕ್ ಪಕ್ಕದ ಸಂಜಯ್ ಮೋದಿ ಕನ್ವೆನ್ಷನ್ ಹಾಲ್ ನಲ್ಲಿ ನಗರದ 80ಕ್ಕೂ ಹೆಚ್ಚು ಹೆಚ್ಐವಿ ಸೋಂಕಿತರಿಗೆ ರೇಷನ್ ಕಿಟ್ ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ಮಾತನಾಡಿ, ದೇಶಾದ್ಯಂತ ಕೊರೋನಾ ಎರಡನೇ ಅಲೆ ಲಾಕ್‌ಡೌನ್ ನಿಂದ ಶ್ರೀಸಾಮಾನ್ಯನ ಜೀವನ ಸಂಕಷ್ಟದಲ್ಲಿ ಸಿಲುಕಿದ್ದ ಇಂತಹ ಸಂದರ್ಭದಲ್ಲಿ ಅನೇಕ ಸಂಘ-ಸಂಸ್ಥೆಗಳು ರಾಜಕೀಯ ಮುಖಂಡರುಗಳು ನೆರವಿನ ಹಸ್ತ ಚಾಚುತ್ತಿದ್ದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿರಂತರವಾಗಿ ಸಮಾಜಮುಖಿ ಕಾರ್ಯ ಗಳಾದ ಹಸಿದವರಿಗೆ ಅನ್ನ, ಮೆಡಿಸನ್ ಕಿಟ್ , ರೇಷನ್ ಕಿಟ್, ವಿತ್ತರಿಸುತ್ತ ಬಂದಿದ್ದು ಇಂದು ಎಚ್ಐವಿ ಸೋಂಕಿತರನ್ನು ಗುರುತಿಸಿ ರೇಷನ್ ಕಿಟ್ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಇದೇ ರೀತಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಜೊತೆಗೆ ಸಮಾಜಮುಖಿ ಕೆಲಸವನ್ನು ಮಾಡುತ್ತಾ ದೊಡ್ಡ ದೊಡ್ಡ ನಾಯಕರಾಗಿ ಬೆಳೆಯಲಿ ಎಂದು ಆಶಿಸಿದರು.
ರಾಜ್ಯ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ ಮಾತನಾಡಿ, ಈಗಾಗಲೇ ಯುವ ಕಾಂಗ್ರೆಸ್ ರಾಜ್ಯಾದ್ಯಂತ ಸಂಕಷ್ಟದಲ್ಲಿರುವ ಶ್ರೀಸಾಮಾನ್ಯನಿಗೆ ನೆರವಿನ ಕಾರ್ಯಗಳನ್ನು ಮಾಡುತ್ತಿದ್ದು ಇಂದು ಸರ್ಕಾರ ಅವೈಜ್ಞಾನಿಕ ಲಾಕ್ ಡೌನ್ ಘೋಷಿಸಿ ಬೇಕಾಬಿಟ್ಟಿ ಪ್ಯಾಕೇಜುಗಳನ್ನು ಘೋಷಿಸಿದ್ದು ಕೂಡಲೇ ಎಲ್ಲಾ ಸ್ತರ ವರ್ಗದ ಹಾಗೂ ಇಂತಹ ಸೋಂಕಿತರಿಗೆ ವಿಶೇಷ ಪ್ಯಾಕೇಜನ್ನು ಘೋಷಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್ ಕುಮಾರೇಶ್ , ಪದಾಧಿಕಾರಿಗಳಾದ ಅರುಣ್ ನವುಲೆ, ದೀಪಕ್, ಮನೋಜ್, ಬಾಲು ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post