ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾದಿಂದ ನೊಂದಿರುವ ಜನರ ಸೇವೆಗೆ ಸರ್ಕಾರದ ನೆರವಿನೊಂದಿಗೆ, ದಾನಿಗಳ, ಸಂಘ-ಸಂಸ್ಥೆಗಳ ನೆರವು ಅತ್ಯಗತ್ಯ. ಇದರಿಂದ ಉತ್ತಮ ಕಾರ್ಯ ಮಾಡಲು ಸಾಧ್ಯ ಎಂದು ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಅಭಿಪ್ರಾಯಪಟ್ಟರು.
ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ನನ್ನ ಕನಸಿನ ಶಿವಮೊಗ್ಗ, ರೋ.ಪೂರ್ವದ ಸಹಯೋಗದೊಂದಿಗೆ ಮೆಗ್ಗಾನ್ ಆಸ್ವತ್ರೆಗೆ ನೀಡಲಾದ ಆಕ್ಸಿಜನ್ ಪ್ಲೋಮೀಟರ್ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರಿ ಆಸ್ವತ್ರೆಗೆ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ರೋಗಿಗಳು ಆಗಮಿಸುತ್ತಿದ್ದು, ಇದಕ್ಕೆ ನಮ್ಮ ಸಿಬ್ಬಂದಿಗಳ ನಿಸ್ವಾರ್ಥ ಸೇವೆಗೆ ಹೆಸರು ವಾಸಿಯಾಗಿರುವುದೇ ಕಾರಣ ಎಂದರು.
ಡಾ.ಶ್ರೀಧರ್ ಮಾತನಾಡಿ, ಇಂತಹ ಕೊಡುಗೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿ. ಈಗಾಗಲೇ ಉತ್ತಮ ಕಾರ್ಯದಿಂದ ನಮ್ಮ ಮೆಗ್ಗಾಮ್ ಆಸ್ವತ್ರೆ ಹೆಸರುಗಳಿಸಿದೆ. ಸಾರ್ವಜನಿಕರ ಸಹಕಾರದಿಂದ ಮುಂದೆಯೂ ನಮ್ಮ ಸಿಬ್ಬಂದಿ ಉತ್ತಮ ಕಾರ್ಯ ಮಾಡಲು ಕಂಕಣ ಬದ್ದರಾಗಿದ್ದೇವೆ ಎಂದರು.
ನನ್ನ ಕನಸಿನ ಶಿವಮೊಗ್ಗದ ಗೋಪಿನಾಥ್ ಮಾತನಾಡಿ, ಆಕ್ಸಿಜನ್ ಸಿಲೆಂಡರ್‌ಗಳಿಗೆ ಅಳವಡಿಸುವ ಈ ಆಕ್ಸಿಜನ್ ಪ್ಲೋ ಮೀಟರ್‌ಗಳು ಹೆಚ್ಚು ಉಪಯೋಗ ಮಾಡುವುದರಿಂದ ಬೇಗ ಹಾಳಾಗುತ್ತವೆ. ಈಗ ಇದರ ಅವಶ್ಯಕತೆ ಹೆಚ್ಚು ಇರುವುದರಿಂದ, ತಕ್ಷಣ ಸ್ವಂದಿಸಿ ಕೊಡುಗೆಯಾಗಿ ನೀಡಲಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸುಮಾರು ೩೮,೦೦೦ರೂ. ಮೌಲ್ಯದ ಫ್ಲೋ ಮೀಟರ್ ಗಳನ್ನು ಕೊಡುಗೆಯಾಗಿ ನೀಡಲು ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಸದಸ್ಯರು, ನನ್ನ ಕನಸಿನ ಶಿವಮೊಗ್ಗ, ರೋಟರಿ ಪೂರ್ವ, ಸಹಕಾರ ನೀಡಿರುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಲಕ್ಷ್ಮೀಗೋಪಿನಾಥ್, ಲಕ್ಷ್ಮೀ, ದಿಲೀಪ್ ನಾಡಿಗ್, ರೊ.ಗಣೇಶ್, ಪ್ರೋ.ವಿಜ್ಞೇಶ್, ಮಲ್ಲಿಕಾರ್ಜುನ್ ಇತರರು ಇದ್ದರು. ಎಸ್.ಎಸ್.ವಾಗೇಶ್ ಸ್ವಾಗತಿಸಿದರು, ಸುನೀಲ್ ಕುಮಾರ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post