ಕಲ್ಪ ಮೀಡಿಯಾ ಹೌಸ್
ಮಥುರಾ: ವೈಯಕ್ತಿಕ ವಿಚಾರಕ್ಕೆ ಗಲಾಟೆ ನಡೆಯುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು 17 ವರ್ಷದ ಬಾಲಕಿಯನ್ನು ಎರಡನೆಯ ಮಹಡಿಯಿಂದ ಕೆಳಕ್ಕೆ ಬಿಸಾಡಿದ್ದು, ಆಕೆ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ವರದಿಯಾಗಿದೆ.
ಇಲ್ಲಿನ ಚಾಥಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಈ ಕುರಿತಂತೆ ಮಥುರಾದ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಪಿಟಿಐಗೆ ಮಾಹಿತಿ ನೀಡಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಬಾಲಕಿಯನ್ನು ಮಹಡಿಯಿಂದ ಎಸೆದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆಕೆ ನೆಲದ ಮೇಲೆ ಬಿದ್ದು ನರಳಾಡುತ್ತಿರುವ ಭೀಕರ ಘಟನೆ ಇದರಲ್ಲಿದೆ.
ಇನ್ನು ಈ ಬಗ್ಗೆ ದೂರು ನೀಡಿರುವ ಬಾಲಕಿಯ ಸಹೋದರ ದಿನೇಶ್ ಸಿಂಗ್, ಬಂಧಿತ ಆರೋಪಿಗಳು ಸುಮಾರು 1 ವರ್ಷದಿಂದ ತನ್ನ ತಂಗಿಗೆ ಕಿರುಕುಳ ನೀಡುತ್ತಿದ್ದರು. ಮೊನ್ನೆ ರಾತ್ರಿ 8ರ ಸುಮಾರಿಗೆ, ನಮ್ಮ ತಂದೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಕರೆ ಮಾಡುವವರು ಯಾರು ಮಾತನಾಡುತ್ತಿದ್ದಾರೆ ಎಂದು ಕೇಳಿದರು ಮತ್ತು ಸ್ಥಳವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆವು. ನಮ್ಮ ತಂದೆ ಅವರು ಚಾಥಾದಿಂದ ಮಾತನಾಡುತ್ತಿದ್ದಾರೆಂದು ಹೇಳಿದರು ಮತ್ತು ಕರೆ ಮಾಡಿದವರಿಗೆ ಅವರ ಹೆಸರನ್ನು ಕೇಳಿದ್ದೇವೆ. ಅಷ್ಟರಲ್ಲೇ ಮೂವರು ನಮ್ಮ ಮನೆಗೆ ಬಂದು ನನ್ನ ತಾಯಿ ಹಾಗೂ ತಂಗಿಯ ಮೇಲೆ ಹಲ್ಲೆ ನಡೆಸಿದರು. ಇಬ್ಬರು ನನ್ನ ತಂಗಿಯನ್ನು ಬಲವಂತವಾಗಿ ಎಳೆದೊಯ್ದು ಎರಡನೆಯ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಎಸೆದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
A 17-year-old girl #thrown down from the terrace of her second floor house in #Mathura by 3 youths who had been harassing her for the past one year. The victim in the hospital with fractured spinal cord. @mathurapolice @Uppolice @adgzoneagra pic.twitter.com/gtJTjClEbq
— Anuja Jaiswal (@AnujaJaiswalTOI) June 23, 2021
ಸಿಸಿಟಿವಿಯಲ್ಲಿ ದೃಶ್ಯ ದಾಖಲು
ಬಾಲಕಿಯನ್ನು ಮೇಲಿನಿಂದ ಎಸೆದು ಆಕೆ ಕೆಳಕ್ಕೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಫುಟೇಜ್’ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಸಾವು ಬದುಕಿನ ನಡುವೆ ಬಾಲಕಿ
ಎರಡನೆಯ ಮಹಡಿಯಿಂದ ಬಿಸಾಡಿದ ಪರಿಣಾಮ ಬಾಲಕಿಯ ಬೆನ್ನು ಮೂಳೆ ಸಂಫೂರ್ಣವಾಗಿ ಮುರಿದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮಥುರಾದ ಖಾಸಗಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆನ್ನು ಮೂಳೆಯ ಜೊತೆಯಲ್ಲಿ ದೇಹದ ಹಲವು ಭಾಗಗಳಿಗೆ ತೀವ್ರ ಹಾನಿಯಾಗಿದ್ದು, ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post