ಕಲ್ಪ ಮೀಡಿಯಾ ಹೌಸ್
ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ವಿಚಿತ್ರ ಕಾರಣಗಳಿಗೂ ಮದುವೆ ರದ್ದಾಗುತ್ತಿರುವ ಪ್ರಕರಣಗಳ ಸಾಲಿಗೆ ಈ ಸುದ್ದಿ ಹೊಸ ಸೇರ್ಪಡೆಯಾಗಿದೆ.
ಉತ್ತರ ಪ್ರದೇಶದ ಅವ್ಡಿಯಾ ಜಿಲ್ಲೆಯಲ್ಲಿ ವಿವಾಹ ನಡೆಯಬೇಕಿದ್ದ ಕೆಲವೇ ಗಂಟೆಗಳ ಮುಂಚೆ ವಧು ಹಿಂದಿ ಪತ್ರಿಕೆ ಓದುವಂತೆ ವರನಿಗೆ ಶರತ್ತು ವಿಧಿಸುತ್ತಾಳೆ. ವರ ಪತ್ರಿಕೆಯನ್ನು ಓದುವಲ್ಲಿ ಯಶಸ್ವಿಯಾಗುತ್ತಾನೆ. ಆದರೂ ಆಕೆ ವಿವಾಹಕ್ಕೆ ಒಪ್ಪದೆ ರದ್ದು ಪಡಿಸುತ್ತಾಳೆ. ವಧುವಿನ ಈ ನಿರ್ಧಾರಕ್ಕೆ ವರ ಐ ಸೈಟ್ ಹೊಂದಿದ್ದು, ಕನ್ನಡಕ ಹಾಕಿ ಪತ್ರಿಕೆ ಓದಿದ್ದಾನೆ ಎಂದಿದ್ದಾಳೆ. ವಿವಾಹದ ಸಂದರ್ಭದಲ್ಲಿ ಹಿಂದಿ ಪತ್ರಿಕೆ ತರಿಸಿದ ಯುವತಿ ಕನ್ನಡಕ ಹಾಕದೆ ಓದುವಂತೆ ತಾಕೀತು ಮಾಡುತ್ತಾಳೆ. ಆದರೆ ವರನಿಗೆ ಇದು ಸಾಧ್ಯವಾಗದೆ ಕನ್ನಡಕ ಹಾಕಿದ ನಂತರ ಸುಲಲಿತವಾಗಿ ಓದುತ್ತಾನೆ. ವರನಿಗೆ ದೃಷ್ಟಿದೋಷ ಇರುವುದರಿಂದ ಮದುವೆಯಾಗಲಾರೆ ಎಂದು ನಿರಾಕರಿಸಿದ ಘಟನೆ ನಡೆದಿದೆ.
ವರ ಹಾಗೂ ವಧುವಿನ ಪೋಷಕರು ಆಕೆಯನ್ನು ಒಪ್ಪಿಸಲು ತಪ್ಪಿಸುವಲ್ಲಿ ವಿಫಲರಾಗಿದ್ದು, ಮೊದಲ ಕುಟುಂಬದ ಭೇಟಿಯ ವೇಳೆ ಹುಡುಗ ಕನ್ನಡಕ ಹಾಕದೆ ಹಾಗಯೇ ಭೇಟಿ ಮಾಡಿದ್ದು, ವಂಚನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ವಿಚಿತ್ರ ಪ್ರಕರಣ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















