ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಒಂದೆಡೆ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಯೋಜನೆಯನ್ನು ಜಾರಿಗೊಳಿಸಿ, ವ್ಯಾಪಕ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆ ಸಿಮ್ಸ್’ನಲ್ಲಿ ಮಾಹಿತಿ ಕೊರತೆಯಿಂದಾಗಿ ಪರದಾಡುತ್ತಿರುವ ನಾಗರಿಕರು ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ವ್ಯಾಪಕ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಸೋಂಕು ಕಡಿಮೆಯಾಗುತ್ತಿರುವ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಸರ್ಕಾರ ಹಾಗೂ ಆಡಳಿತ ಎಡವುತ್ತಿದೆ ಎಂಬುದಕ್ಕೆ ಸಿಮ್ಸ್ ಆವರಣ ಸಾಕ್ಷಿಯಾಗಿದೆ.ಸಿಮ್ಸ್ ಕಾಲೇಜಿನ ಕಟ್ಟಡದಲ್ಲಿ ಕೋವ್ಯಾಕ್ಸಿನ್ ನೀಡುವ ವ್ಯವಸ್ಥೆ ಇದೆ. ವೈಪರೀತ್ಯವೆಂದರೆ ಅಲ್ಲಿಗೆ ಸೂಚನಾ ಫಲಕಗಳೇ ಇಲ್ಲ. ಯಾಕೆ ಇಂತಹ ನಿರ್ಲಕ್ಷ್ಯ? ಇದರಿಂದಾಗಿ ಜನಕ್ಕೆ ಬಹಳಷ್ಟು ಗೊಂದಲವುಂಟಾಗಿದೆ.
ಇನ್ನೊಂದು ಮೂರ್ಖನಡೆಯೆಂದರೆ ಮೊದಲ ಮತ್ತು ಎರಡನೆಯ ಡೋಸ್ ನವರಿಗೆ ಕಾಮನ್ ಕ್ಯೂ ಮಾಡಿರುವುದು. ವಾಸ್ತವವಾಗಿ ಎರಡನೆಯ ಡೋಸ್’ಗೆ ಕಾಯಬೇಕಾಗಿಲ್ಲ ಎಂಬ ಸೂಚನೆಯಿದೆ. ಆದರೆ, ಇಲ್ಲಿ ಎರಡನೆಯ ಡೋಸ್ ಪಡೆದುಕೊಳ್ಳುವವರಿಗೆ ಪ್ರತ್ಯೇಕ ವ್ಯವಸ್ಥೆ ಹಾಗೂ ಆ ಕುರಿತಂತೆ ಯಾವುದೇ ಸೂಚನೆಯೇ ಇಲ್ಲ. ಇದರಿಂದಾಗಿ ವೃದ್ದರು, ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ಜನಗಳನ್ನ ಕುರಿಗಳ ಹಾಗೆ ಸಾಲಿನಲ್ಲಿ ನಿಂತು ಕಷ್ಟಪಡುವಂತಾಗಿದೆ.ಅತ್ಯಂತ ಪ್ರಮುಖವಾಗಿ ಇಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಕುರಿತಾಗಿ ಯಾವುದೇ ರೀತಿಯ ಸೂಕ್ತ ಮಾಹಿತಿಯೇ ಇಲ್ಲ.
ಸರಿಯಾದ ಮಾಹಿತಿ ಇಲ್ಲದೇ ಕ್ಯೂನಲ್ಲಿ ನಿಂತು ಕಾಯುತ್ತಿದ್ದ ಕೆಲವರು ಕಲ್ಪ ಮೀಡಿಯಾ ಹೌಸ್ ಜೊತೆ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಗಂಟೆಗಟ್ಟಲೆಯಿಂದ ನಿಂತು ಕಾಯುತ್ತಿದ್ದೇವೆ. ಇಲ್ಲಿ ಹೇಳುವವರೂ, ಕೇಳುವವರೂ ಯಾರೂ ಇಲ್ಲ. ಪ್ರಧಾನಿಯವರು ನೋಡಿದರೆ ಎಲ್ಲರಿಗೂ ಲಸಿಕೆ ಘೋಷಣೆ ಮಾಡಿ ಹಾಕಿಸಿಕೊಳ್ಳಿ ಎನ್ನುತ್ತಾರೆ. ಆದರೆ, ಸ್ಥಳೀಯ ಮಟ್ಟದಲ್ಲಿ ಮಾಹಿತಿ ಕೊರತೆ ಹಾಗೂ ಅವ್ಯವಸ್ಥೆಯಿಂದ ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೃದ್ಧರು ಹಾಗೂ ಅಂಗವಿಕಲರು ಏನು ಮಾಡಬೇಕು ಎಂದು ಕಿಡಿ ಕಾರಿದರು.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸಿಮ್ಸ್ ಆಡಳಿತ ತತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಜೊತೆಯಲ್ಲಿ ವ್ಯವಸ್ಥಿತವಾಗಿ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post