ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ವಿದ್ಯುತ್ ಅವಘಡ ತಪ್ಪಿಸಿ, ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ 11,000 ವೋಲ್ಟೇಜ್‌ನ 11 ಕೆವಿ ಕೇಬಲ್ ಅನ್ನು ನೆಲದಡಿ ಅಳವಡಿಸುವ ಕಾಮಗಾರಿಯನ್ನು ಬೆಸ್ಕಾಂ ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಇದರ ಬೆನ್ನಲ್ಲೆ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿರುವ ಶೋಚನೀಯ ಸಂಗತಿಯಾಗಿದೆ.
ನಗರದ ಬನಶಂಕರಿ 3ನೇ ಹಂತದ ಇಟ್ಟಮಡುವಿನ ತಿಮ್ಮರಾಯ ಗೌಡ ಲೇಔಟ್‌ನ ಹಲವು ರಸ್ತೆಗಳಲ್ಲಿ ಭೂಗತ ಕೇಬಲ್ ಅಳವಡಿಸಲು ಗುಂಡಿಗಳನ್ನು ತೆಗೆದು ಸರಿಯಾಗಿ ಮುಚ್ಚದೆ ಕಸ ಕಡ್ಡಿಗಳು ಶೇಖರಗೊಂಡಿದೆ. ಹಾಗೂ ಎಲ್ಲೆಂದರಲ್ಲೆ ಕೇಬಲ್‌ಗಳು ಬಿದ್ದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಕೂಡಲೇ ಸಂಬಂಧಪಟ್ಟವರು ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಇದರ ಸಮರ್ಪಕ ನಿರ್ವಹಣೆಯತ್ತ ಗಮನ ಹರಿಸಬೇಕೆಂಬುದು ಸ್ಥಳೀಯರು ಮನವಿ ಮಾಡಿದ್ದಾರೆ.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post