ಕಲ್ಪ ಮೀಡಿಯಾ ಹೌಸ್
ಮೈಸೂರು : ಲಿವಿಂಗ್ ಟುಗೆದರ್ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಫ್ಯಾಷನ್ ಆಗಿದ್ದು, ಯುವ ದಂಪತಿಗಳ ಹುಚ್ಷಾಟಕ್ಕೆ ತಂದೆ ತಾಯಿಯಿದ್ದರೂ ಹಸುಗೂಸು ಅನಾಥವಾಗಿದೆ.
ಕಾಲೇಜು ಓದುತ್ತಿದ್ದಾಗಲೇ ಪರಿಚಯವಾಗಿದ್ದ 21 ವರ್ಷದ ಯುವ ಜೋಡಿ ಓದು ಮುಗಿದ ಬಳಿಕ ಇಬ್ಬರೂ ಕೆಲಸ ಮಾಡಿಕೊಂಡು ಲಿವಿಂಗ್ ಟು ಗೆದರ್‌ನಲ್ಲಿದ್ದರು. ತಾವು ದಂಪತಿಗಳು ಎಂದು ಹೇಳಿ ಮೈಸೂರಿನ ಸರಸ್ವತಿಪುರಂನಲ್ಲಿ ಬಾಡಿಗೆ ಮನೆಯೊಂದನ್ನು ಪಡೆದಿದ್ದ ಇವರನ್ನು ಅಲ್ಲಿನ ಸ್ಥಳೀಯರು ಗಂಡ ಹೆಂಡತಿ ಎಂದೇ ಭಾವಿಸಿದ್ದರು.
ಕೆಲ ತಿಂಗಳಿನಲ್ಲಿ ಗರ್ಭಿಣಿಯಾಗಿದ್ದ ಯುವತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗುವಿನ ಪಾಲನೆ ಮಾಡಲು ಮಾತ್ರ ಇಬ್ಬರೂ ಸಿದ್ಸರಿರಲಿಲ್ಲದ ಕಾರಣ ಮಗುವನ್ನು ದತ್ತು ನೀಡುವ ಯೋಚನೆ ಮಾಡಿ ಹುಡುಕಾಟ ಆರಂಭಿಸಿದ್ದರು. ಸರಸ್ವತೀಪುರಂ ನಿವಾಸಿಯೋರ್ವರು ಮಗುವನ್ನು ದತ್ತು ಪಡೆಯಲು ಮುಂದಾದರೂ ಕಾನೂನಿನ ಭಯಕ್ಕೆ ಹೆದರಿ ಹಿಂಡೇಟು ಹಾಕಿದ್ದಾರೆ.
ಇನ್ನೊಂದೆಡೆ ಈ ಇಬ್ಬರೂ ಲಿವಿಂಗ್ ಟು ಗೆದರ್‌ನಲ್ಲಿ ಇರುವ ವಿಚಾರ ತಮ್ಮ ಮನೆಯವರಿಗೂ ತಿಳಿದಿರಲಿಲ್ಲ. ಇಬ್ಬರ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದಾಗಲೂ ಒಂದಲ್ಲ ಒಂದು ಕಾರಣ ನೀಡಿ ಮುಂದೂಡುತ್ತಲೇ ಬಂದಿದ್ದಾರೆ. ಇಬ್ಬರ ಹುಚ್ಚಾಟ ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವೇಳೆಯಲ್ಲಿ ಇಬ್ಬರ ಗುಟ್ಟು ರಟ್ಟಾಗಿದೆ. ಪೊಲೀಸರು ದಂಪತಿಗಳ ಬಳಿ ಮಗುವಿನ ಪಾಲನೆ ಮಾಡಲು ವಿನಂತಿಸಿದ್ದಾರೆ. ಆದರೆ ಇಬ್ಬರೂ ಒಪ್ಪಿಗೆ ಸೂಚಿಸಲಿಲ್ಲ.
ಕೊನೆಗೆ ಇಬ್ಬರ ಪೋಷಕರನ್ನು ಕರೆಸಿ ಮನವೊಲಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ. ಮಗುವನ್ನು ದತ್ತು ನೀಡುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಕೂಡ ಇಬ್ಬರನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದರೂ ಇಬ್ಬರೂ ಮಗುವನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಕಾರಣ ಇಬ್ಬರಿಗೂ ತಮ್ಮ ತಮ್ಮ ನಿರ್ಧಾರ ತಿಳಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಯಿತು. ಕೊನೆಗೆ ಮಗುವನ್ನು ಸಂಸ್ಥೆಯೊಂದಕ್ಕೆ ನೀಡಲಾಗಿದ್ದು, ಪಾಲನೆ ಮಾಡಲಾಗುತ್ತಿದೆ. ಯುವ ಜನತೆಯ ಲಿವಿಂಗ್ ಟು ಗೆದರ್ ಹುಚ್ಚಾಟಕ್ಕೆ ಮಗು ತಂದೆ ತಾಯಿ ಇದ್ದರೂ ಅನಾಥವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















