ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕುಂಸಿ ವ್ಯಾಪ್ತಿಯ ರಾಗಿ ಹೊಸಳ್ಳಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಘಟನೆ ಹಿನ್ನಲೆ:
ಶಾಂತಪ್ಪ (75) ಮೃತ ವ್ಯಕ್ತಿಯಾಗಿದ್ದು, ಪವನ್ ಕುಮಾರ್ ಎಂಬಾತನು ಶಾಂತಪ್ಪ ಅವರನ್ನು ಟ್ರ್ಯಾಕ್ಟರ್ ಮಡ್‌ಗಾರ್ಡ್ ಮೇಲೆ ಕೂರಿಸಿಕೊಂಡು ರಾಗಿಹೊಸಳ್ಳಿ ಹೋಗುವ ರಸ್ತೆಯಲ್ಲಿ ಟ್ರ್ಯಾಕ್ಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಶಾಂತಪ್ಪ ಟ್ರ್ಯಾಕ್ಟರ್‌ನ ಎಡಭಾಗಕ್ಕೆ ಕೆಳಗೆ ಬಿದ್ದು, ಬಲಭಾಗದ ಸೊಂಟ ಹಾಗೂ ರೊಂಡಿಗೆ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಮೃತನ ಮಗ ರಮೇಶ್ ದೂರು ನೀಡಿದ್ದು, ಕಲಂ 279, 304(ಎ) ಐಪಿಸಿ ರಿತ್ಯಾ ಪ್ರಕರಣ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post