No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾನಿಲಯ: ನವೀನ ಸಂಯೋಜನೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

kalpa News by kalpa News
July 7, 2021
in ಶಿವಮೊಗ್ಗ
0
ಮಾರ್ಚ್ 28ರಂದು ಕುವೆಂಪು ವಿವಿ ಘಟಿಕೋತ್ಸವ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ದೈಹಿಕ ಶಿಕ್ಷಣ, ಬಿ.ವೋಕ್ ವೃತ್ತಿಪರ ವಿಷಯಗಳು ಹಾಗೂ ಡಿಪ್ಲೋಮಾ ಕೋರ್ಸ್ ವಿಷಯಗಳ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಡೆಸಲು ಆರ್ಥಿಕ ಸಾಮರ್ಥ್ಯವುಳ್ಳ ನೋಂದಾಯಿತ ಶೈಕ್ಷಣಿಕ ಸೊಸೈಟಿ, ಸಾರ್ವಜನಿಕ ಟ್ರಸ್ಟ್, ಸಂಸ್ಥೆಗಳಿಂದ ನವೀನ ಸಂಯೋಜನೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಿಂದಲೂ ತಮ್ಮ ಕಾಲೇಜುಗಳ ಮುಂದುವರಿಕೆ, ಸಂಯೋಜನೆ, ಶಾಶ್ವತ ಸಂಯೋಜನೆ, ಶಾಶ್ವತ ಸಂಯೋಜನಾ ಪರಿಶೀಲನೆ, ಶಾಶ್ವತ ಸಂಯೋಜನೆಯ ನವೀಕರಣ, ಹೊಸ ಪದವಿ ಹಾಗೂ ಸ್ನಾತಕೋತ್ತರ, ಪದವಿ ಕೋರ್ಸುಗಳಿಗೆ ನವೀನ ಸಂಯೋಜನೆ, ಐಚ್ಚಿಕ ವಿಷಯ ಸಮೂಹ, ಭಾಷಾ ವಿಷಯಗಳ ನವೀನ ಸಂಯೋಜನೆ, ವಿದ್ಯಾರ್ಥಿ ಪ್ರವೇಶಾತಿ ಪ್ರಮಾಣದ ಹೆಚ್ಚಳ ಮುಂತಾದವುಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸಂಬಂಧಿಸಿದ ಟ್ರಸ್ಟ್‌ಗಳು, ವಿದ್ಯಾಸಂಸ್ಥೆಗಳು ಹಾಗೂ ಈಗಾಗಲೇ ಸಂಯೋಜನೆ ಹೊಂದಿರುವ ಕಾಲೇಜುಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ನಂತರ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ಸಂಯೋಜನಾ ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ದ್ವಿಪ್ರತಿಯಲ್ಲಿ ಪ್ರತ್ಯೇಕವಾಗಿ ಕಾಲೇಜು ಅಭಿವೃದ್ಧಿ ಪರಿಷತ್ ಕಚೇರಿಗೆ ಸಲ್ಲಿಸಬಹುದಾಗಿದೆ.

ಬಿ.ಎಡ್.,/ಬಿ.ಪಿ.ಎಡ್., ಅಥವಾ ಇತರೆ ವೃತ್ತಿಪರ ಕಾಲೇಜು ಪ್ರಾರಂಭಿಸಲು ಇಚ್ಚಿಸುವ ನೋಂದಾಯಿತ ಸಂಸ್ಥೆಗಳು ಆನ್‌ಲೈನ್ ಮೂಲಕ ಸಂಯೋಜನಾ ಅರ್ಜಿ ಸಲ್ಲಿಸುವ ಮೊದಲು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಅಥವಾ ಸಂಬಂದಿಸಿದ ಇತರ ಸಕ್ಷಮ ಪ್ರಾಧಿಕಾರಗಳ ಪೂರ್ವಾನುಮೋದನೆಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು. ಜೊತೆಗೆ ವಿಶ್ವವಿದ್ಯಾಲಯದಿಂದ ನಿಯಮಾನುಸಾರ ನಿರಪೇಕ್ಷಣಾ ಪತ್ರವನ್ನು ಪಡೆದಿರಬೇಕು. ಸಂಯೋಜಿತ ಕಾಲೇಜುಗಳು ಅಥವಾ ನೋಂದಾಯಿತ ಸಂಸ್ಥೆಗಳು ಸಂಯೋಜನಾ ಅರ್ಜಿಗಳನ್ನು ಸಲ್ಲಿಸುವಾಗ ವಿಶ್ವವಿದ್ಯಾಲಯದ ಪರಿನಿಯಮಾವಳಿಯನ್ವಯ ಅನುಮೋದನೆಗೊಂಡಿರುವ ಪದವಿ ಕೋರ್ಸು/ವಿಷಯ/ಐಚ್ಚಿಕ ವಿಷಯ ಸಮೂಹಗಳಿಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

ಐದು ವರ್ಷಗಳ ನಿರಂತರ ತಾತ್ಕಾಲಿಕ ಸಂಯೋಜನೆಯನ್ನು ಪಡೆದ ಕಾಲೇಜುಗಳು ತಮ್ಮ ಅಸ್ತಿತ್ವದಲ್ಲಿರುವ ಕೋರ್ಸು/ವಿಷಯಗಳಿಗೆ ಸ್ಥಳೀಯ ತಪಾಸಣಾ ಸಮಿತಿಗಳು ವಿಧಿಸಿರುವ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಿ, ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಕಾಲಕಾಲಕ್ಕೆ ನಿಗದಿಪಡಿಸುವ ಶೈಕ್ಷಣಿಕ ಗುಣಮಟ್ಟ ಹೊಂದಿರುವ ಹಾಗೂ ನ್ಯಾಕ್‌ನಿಂದ ಕನಿಷ್ಟ ‘ಸಿ’ ದರ್ಜೆ ಹೊಂದಿರುವ ಕಾಲೇಜುಗಳು ಮಾತ್ರ ಶಾಶ್ವತ ಸಂಯೋಜನೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಬಹುದು. ಕನಿಷ್ಟ ೫ವರ್ಷಗಳ ಸಂಯೋಜನೆಯನ್ನು ಪೂರೈಸಿರುವ ಕಾಲೇಜುಗಳು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಉದ್ದೇಶಿಸಿದಲ್ಲಿ ಅಂತಹ ಸ್ನಾತಕೋತ್ತರ ಪದವಿ ಕೋರ್ಸಿಗೆ ಸಂಬಂಧಿಸಿದ ವಿಷಯದಲ್ಲಿ ಯುಜಿಸಿ ನಿಯಮಗಳನ್ವಯ 4 ಜನ ಅಧ್ಯಾಪಕರು ಹಾಗೂ ಅವರಲ್ಲಿ ಕನಿಷ್ಟ ಇಬ್ಬರು ಪಿಹೆಚ್‌ಡಿ., ಪದವಿ ಹೊಂದಿದವರಾಗಿರಬೇಕು. ಸದರಿ ಅಧ್ಯಾಪಕರು ಸ್ನಾತಕ ಕೋರ್ಸುಗಳ ಪಾಠ ಪ್ರವಚನಗಳನ್ನು ಮಾತ್ರ ನಡೆಸಬೇಕು. ಸ್ನಾತಕೋತ್ತರ ವ್ಯಾಸಂಗದ ಜೊತೆಗೆ ಸಂಶೋಧನಾ ವ್ಯಾಸಂಗಕ್ಕಾಗಿ ವಿಶ್ವವಿದ್ಯಾಲಯ ಮತ್ತು ಸರ್ಕಾರದ ಮಾರ್ಗಸೂಚಿಗಳನ್ವಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ಅಂತಹ ಕಾಲೇಜುಗಳು 2021-22ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪ್ರಾರಂಭಿಸಲು ಪ್ರತ್ಯೇಕವಾಗಿ ದ್ವಿಪ್ರತಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.

ಹೊಸ ಕಾಲೇಜು ಆರಂಭಿಸಲು ಇಚ್ಚಿಸುವ ನೋಂದಾಯಿತ ಸಂಘ-ಸಂಸ್ಥೆಗಳು ನವೀನ ಸಂಯೋಜನೆ ಮಂಜೂರಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು, ಸರ್ಕಾರದ ಪೂರ್ವಾನುಮತಿಯನ್ನು ಪಡೆಯದ ಹೊರತು ಯಾವುದೇ ಹೊಸ ಕೋರ್ಸ್/ಭಾಷಾ ವಿಷಯ/ಹೆಚ್ಚುವರಿ ಪ್ರವೇಶಾತಿ ಸಂಖ್ಯೆ ಹಾಗೂ ವಿದ್ಯಾರ್ಥಿ ಪ್ರಮಾಣದ ಹೆಚ್ಚಳಕ್ಕೆ ಸಂಯೋಜನೆ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
ಪರಿಶಿಷ್ಟ ಜಾತಿ/ಪಂಗಡದ ಆಡಳಿತ ಮಂಡಳಿಯವರು ನಡೆಸುವ ಕಾಲೇಜುಗಳು ನಿಗಧಿತ ಸಂಯೋಜನಾ ಶುಲ್ಕದಲ್ಲಿ ಶೇ.50ರಷ್ಟು ಮಾತ್ರ ಪಾವತಿಸಬಹುದಾಗಿದೆ. (ಅಭಿವೃದ್ದಿ ಮತ್ತು ಸೇವಾಶುಲ್ಕವನ್ನು ಸಂಪೂರ್ಣವಾಗಿ ಪಾವತಿಸಬೇಕು.) ಇದಕ್ಕೆ ಪೂರಕವಾಗಿ ಸಂಬಂಧಿಸಿದ ಇಲಾಖೆಯಿಂದ ಪಡೆದಿರುವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಂತಹ ಪ್ರಮಾಣಪತ್ರ ಸಲ್ಲಿಸದಿದ್ದಲ್ಲಿ ಶೇ.50ರ ವಿನಾಯಿತಿಗೆ ಪರಿಗಣಿಸಲಾಗುವುದಿಲ್ಲ.

ನಿಗಧಿತ ಸಂಯೋಜನಾ ಶುಲ್ಕಗಳ ಮಾಹಿತಿ, ಸ್ನಾತಕೋತ್ತರ ಅರ್ಜಿಗಳ ನಮೂನೆ, ಸಂಯೋಜನೆಗೆ ಸಂಬಂಧಿಸಿದ ಸೂಚನೆ ಹಾಗೂ ಇತರೆ ಮಾಹಿತಿಗಳನ್ನು ವಿಶ್ವವಿದ್ಯಾಲಯದ ಜಾಲ ತಾಣ www.kuvempu.ac.in ದಲ್ಲಿ ಪಡೆಯಬಹುದಾಗಿದ್ದು, ಅನ್‌ಲೈನ್ ಸಂಯೋಜನೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಲಿಂಕ್ http://www.onlineaffiliation.karnataka.gov.in/Affiliation2111/ ಗೆ ಲಾಗಿನ್ ಆಗುವುದು. ಶಾಶ್ವತ ಸಂಯೋಜನೆ ಹೊಂದಿರುವ ಕಾಲೇಜುಗಳು ಕೆಲವು ಪದವಿ ಕೋರ್ಸ್. ಐಚ್ಚಿಕ ವಿಷಯ ಮತ್ತು ಭಾಷಾ ವಿಷಯಗಳಲ್ಲಿ ತಾತ್ಕಾಲಿಕ ಸಂಯೋಜನೆ ಪಡೆದಿದ್ದಲ್ಲಿ ಅವುಗಳ ಮುಂದುವರಿಕೆ ಸಂಯೋಜನೆಗಾಗಿ ಪ್ರತ್ಯೇಕವಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಸಂಯೋಜನಾ ಅರ್ಜಿ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಅಥವಾ ಖುದ್ದಾಗಿ ಕುಲಸಚಿವರು, ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451 ಇವರಿಗೆ ಸಲ್ಲಿಸಿ, ಆನ್‌ಲೈನ್ ಅರ್ಜಿಗಳ ಪ್ರತಿಗಳನ್ನು ನಿರ್ದೇಶಕರು, ಕಾಲೇಜು ಅಭಿವೃದ್ಧಿ ಪರಿಷತ್, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ ಇವರ ಕಚೇರಿಗೆ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕ ಮತ್ತು ಸಂಬಂಧಪಟ್ಟ ಸಂಯೋಜನಾ ಶುಲ್ಕಗಳನ್ನು ನೆಫ್ಟ್ ಮೂಲಕ ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ ಶಾಖೆ, ಶಂಕರಘಟ್ಟ ಇವರಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಯೋಜನೆ ಖಾತೆ ಸಂಖ್ಯೆ 54023035811 IFSC Code SBIN 0040759)ಗೆ ವಿದ್ಯುನ್ಮಾನ ಮಾಧ್ಯಮದ ಮೂಲಕ ಜಮಾ ಮಾಡುವಂತೆ ಸೂಚಿಸಲಾಗಿದೆ.

ದಂಡಶುಲ್ಕವಿಲ್ಲದೆ ಜುಲೈ 16 ರೊಳಗಾಗಿ ಹಾಗೂ ರೂ. 10,000 ದಂಡಶುಲ್ಕದೊಂದಿಗೆ ಜುಲೈ 23 ರೊಳಗಾಗಿ ಹಾಗೂ ದಂಡಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಸಚಿವರು ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteKuvempu UniversityLatest News KannadaLocal NewsMalnad NewsNews in KannadaNews KannadaShimogaShivamoggaShivamogga Newsಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಪಿ. ವೀರಭದ್ರಪ್ಪಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share210Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ: ಸಂಸದ ರಾಘವೇಂದ್ರ ಸೂಚನೆ

Next Post

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲ್ಲಿ ಹರಿಪ್ರಿಯಾಗೆ ಶ್ರೇಷ್ಟ ನಟಿ ಪ್ರಶಸ್ತಿ…

kalpa News

kalpa News

Next Post
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲ್ಲಿ ಹರಿಪ್ರಿಯಾಗೆ ಶ್ರೇಷ್ಟ ನಟಿ ಪ್ರಶಸ್ತಿ…

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲ್ಲಿ ಹರಿಪ್ರಿಯಾಗೆ ಶ್ರೇಷ್ಟ ನಟಿ ಪ್ರಶಸ್ತಿ...

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL