Read - < 1 minute
ಬೆಂಗಳೂರು, ಅ.4: ನಟಿ ರಾಧಿಕಾ ಕುಮಾರಸ್ವಾಮಿ ಮರು ಮದುವೆಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ, ಆದರೆ ಸ್ವತಃ ರಾಧಿಕಾ ಈ ಬಗೆಗಿನ ವದಂತಿಗೆ ತೆರೆ ಎಳೆದಿದ್ದಾರೆ.
ತಮ್ಮ ಕುಟುಂಬ ಸ್ನೇಹಿತ, ಮಂಗಳೂರು ಮೂಲದ ಉದ್ಯಮಿ ವಿವೇಕ್ ಜತೆ ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಹರಿದಾಡಿವೆ.
ಕಳೆದ ವಾರ ಈ ಇಬ್ಬರು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಟಿವಿ ಮಾಧ್ಯಮವೊಂದಕ್ಕೆ ಸ್ಪಷ್ಟೀಕರಣ ನೀಡಿರುವ ರಾಧಿಕಾ ಅವರು ವಿವೇಕ್ ಅವರು ನಮ್ಮ ಕುಟುಂಬ ಸ್ನೇಹಿತ. ನಾನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.
ವಿವೇಕ್ ಕೃಷಿ ಮಾಡಿಕೊಂಡಿದ್ದಾರೆ. ಕೃಷಿಗೆ ಸಂಬಂಧಿಸಿದ ವಿಷಯಕ್ಕೆ ಅವರಿದ್ದ ಸ್ಥಳಕ್ಕೆ ಹೋದಾಗ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಈ ಘಟನೆಯಿಂದ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.
ವಿವೇಕ್ ಕೂಡ ರಾಧಿಕಾರೊಂದಿಗೆ ಮದುವೆಯಾಗಿರುವ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ರಾಧಿಕಾ ಅವರ ಈ ರೀತಿಯ ಪೋಟೋ ದೃಶ್ಯಗಳು ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿದ್ದು, ಸೆಲಿಬ್ರಿಟಿಗಳು ಈ ರೀತಿ ಫೋಟೋ ತೆಗಿಸುವ ವೇಳೆ ಎಚ್ಚರಿಕೆ ವಹಿಸುವ ಅಗತ್ಯ, ಇಲ್ಲವಾದಲ್ಲಿ ಅನಗತ್ಯವಾಗಿ ಅವರ ವ್ಯಕ್ತಿ ಜೀವನಕ್ಕೂ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ.
Discussion about this post