ಕಲ್ಪ ಮೀಡಿಯಾ ಹೌಸ್
ಹುಬ್ಬಳ್ಳಿ: ಎಮ್‌ಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಹೆಚ್.ಹಾಲಪ್ಪ ಅವರು ಇಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರೊಂದಿಗೆ, ಎಮ್‌ಎಸ್‌ಐಎಲ್ ನಿಗಮದ ಸಭೆ ನೆಡೆಸಿ, ಸ್ಥಳ ಪರಿಶೀಲನೆ ನಡೆಸಿದರು.
ನಿಗಮವು ಹುಬ್ಬಳ್ಳಿಯಲ್ಲಿ 2 ಎಕರೆ ಜಾಗ ಹೊಂದಿದೆ. ಈ ಪ್ರದೇಶದಲ್ಲಿ ಅಂದಾಜು 30 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ, ಗೋದಾಮು ಹಾಗೂ ವಸತಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಖಾಸಗಿಯವರಿಗೆ ವಾರ್ಷಿಕ 40 ಲಕ್ಷ ರೂ ಬಾಡಿಗೆ ಕಟ್ಟುವುದು ಉಳಿತಾಯವಾಗುವುದರೊಂದಿಗೆ, ಮುಂದಿನ ದಿನಗಳಲ್ಲಿ ಸಂಸ್ಥೆಗೆ ಲಾಭದಾಯಕವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಮ್‌ಎಸ್‌ಐಎಲ್ ಎಂ.ಡಿ ವಿಕಾಸ್ ಕುಮಾರ್, ಸಿಜಿಎಮ್ ರಮಾಕಾಂತ್ ಹೆಬ್ಬಳ್ಳಿ, ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post