ಕಲ್ಪ ಮೀಡಿಯಾ ಹೌಸ್
ವಿಜಯನಗರ: ಸರ್ಕಾರದ ಆದೇಶ ಮೀರಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಹೊಸಪೇಟೆಯ ಖಾಸಗಿ ಶಾಲೆ ಎದುರು ಪ್ರತಿಭಟನೆ ನಡೆಸಿದರು.
ಶಾಲೆಯ ಮುಖ್ಯಶಿಕ್ಷಕಿ ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಖಾಸಗಿ ಶಾಲೆಯವರು ಪ್ರವೇಶ ಶುಲ್ಕ ಹೆಚ್ಚಳ ಮಾಡಿದ್ದಾರೆ. ಯಾವ ಶಾಲೆಯವರು ಶುಲ್ಕ ಹೆಚ್ಚಿಸಬಾರದು ಎಂದು ಸರ್ಕಾರದ ನಿರ್ದೇಶನವಿದೆ. ಹೀಗಿದ್ದರೂ ಅದನ್ನು ಗಾಳಿಗೆ ತೂರಿ ಪೋಷಕರನ್ನು ಹಿಂಸಿಸುತ್ತಿದ್ದಾರೆ. ಈ ವರ್ಷ ನರ್ಸರಿ ಪ್ರವೇಶಕ್ಕೆ 6,000ರೂ. ಶುಲ್ಕ ಹೆಚ್ಚಿಗೆ ಮಾಡಿದ್ದಾರೆ. ಇತರೆ ತರಗತಿಗೆ ಇದಕ್ಕಿಂತ ಹೆಚ್ಚಿದೆ’ ಎಂದು ಆರೋಪಿಸಿದರು.
ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಯನ್ನು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ . ಬಳಿಕ ಸ್ಥಳಕ್ಕೆ ಆಗಮಿಸಿದ ಶಿಕ್ಷಣಾಧಿಕಾರಿ ಸುನಂದಾ ಅವರನ್ನು ಪೋಷಕರು ತರಾಟೆ ತೆಗೆದುಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಹತ್ತು ಹಲವಾರು ನೆಪ ಹೇಳಿ ಮಕ್ಕಳಿಗೆ ಫೀಸ್ ಕಟ್ಟುವಂತೆ ಕಿರುಕುಳ ನೀಡುತ್ತಾರೆ. ಕೂಡಲೇ ಶಾಲೆಯನ್ನು ಕ್ಲೋಜ್ ಮಾಡುವಂತೆ ಪಟ್ಟುಹಿಡಿದರು. ಪೋಷಕರನ್ನು ಸಮಾಧಾನ ಮಾಡಿದ ಬಿಇಓ ಅವರು ಶಾಲೆ ಆ ರೀತಿಯಲ್ಲಿ ಪಡೆದುಕೊಂಡಿದ್ದರೆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post