ಕಲ್ಪ ಮೀಡಿಯಾ ಹೌಸ್
ತಿರುವನಂತಪುರಂ: ಕೋವಿಡ್ ಆತಂಕದ ನಡುವೆಯೇ ದಕ್ಷಿಣ ಭಾರತದ ಪ್ರಖ್ಯಾತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲನ್ನು ಇಂದು ತೆರೆಯಲಾಗಿದ್ದು, ಸೀಮಿತ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇಂದು ಮುಂಜಾನೆಯಿಂದಲೇ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ತಿಂಗಳ ಐದು ದಿನಗಳ ಪೂಜೆ ನೆರವೇರಿಸಲು ದೇವಾಲಯದ ಬಾಗಿಲು ತೆರೆಯಲಾಗಿದೆ. ಆನ್‌ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ 5 ಸಾವಿರ ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ತನ್ನ ಅಧೀನದಲ್ಲಿರುವ 1,200 ದೇವಾಲಯಗಳಿಗೆ ಭಕ್ತರು ಪ್ರವೇಶಿಸದಂತೆ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಬಂಧ ವಿಧಿಸಿತ್ತು. ಆದಾಗ್ಯೂ ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡಿತ್ತು.
ಏನಿವೆ ಮಾರ್ಗಸೂಚಿಗಳು?
ಇಂದಿನಿಂದ 21ರವರೆಗೆ ಮಾಸಿಕ ವಿಧಿವಿಧಾನಗಳಿಗಾಗಿ ದೇವಾಲಯ ಬಾಗಿಲು ಓಪನ್
ಮಾಸಿಕ ಆಚರಣೆಗಳಿಗಾಗಿ ದೇವಾಲಯವನ್ನು ತಿಂಗಳ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾತ್ರ ತೆರೆಯಲಾಗುತ್ತಿದೆ.
ಆನ್‌ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ 5 ಸಾವಿರ ಮಂದಿಗೆ ಮಾತ್ರ ಪ್ರವೇಶಾವಕಾಶ.
ಎಲ್ಲ ಭಕ್ತಾದಿಗಳು ಕಡ್ಡಾಯವಾಗಿ 48 ಗಂಟೆಗಳ ಹಿಂದೆ ನೀಡಿದ ನೆಗೆಟಿವ್ ಆರ್‌ಟಿ-ಪಿಸಿಆರ್ ಕೋವಿಡ್-19 ಪರೀಕ್ಷಾ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ದೇಗುಲ ಆವರಣದಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸೂಕ್ತ ನಿಯಮಾವಳಿಗಳ ಪಾಲನೆ ಕಡ್ಡಾಯ.
ಮಾಸಿಕ ಧಾರ್ಮಿಕ ಆಚರಣೆಗಳ ಬಳಿಕ ಈ ತಿಂಗಳ 21ರಂದು ದೇವಾಲಯ ಮತ್ತೆ ಮುಚ್ಚಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post