ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶ್ರೀವಿಜಯ ಕಲಾನಿಕೇತನ (ರಿ) ವತಿಯಿಂದ ಜುಲೈ 24ರಂದು ಸಂಜೆ 6 ಗಂಟೆಗೆ ಪವಿತ್ರಾಂಗಣದಲ್ಲಿ ಗುರುವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಗುರುಪೂರ್ಣಿಮೆಯಂದು ವಿದುಷಿ ಮೀರಾ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೆ. ಭೂಮಿ ಅವರು ಅಡಿದಂ ಗೀತವಂದನೆ ಸಮರ್ಪಿಸಲಿದ್ದಾರೆ. ಗಾಯನಕ್ಕೆ ಪಿಟೀಲಿನಲ್ಲಿ ವಿ. ಮತ್ತೂರು ಮಧುಮುರಳಿ ಹಾಗೂ ಮೃದಂಗದಲ್ಲಿ ವಿ. ಅರವಿಂದ್ ಹೊಳ್ಳ ಸಹಕರಿಸಲಿದ್ದಾರೆ. ಶ್ರೀವಿಜಯದ ಅಧ್ಯಕ್ಷರಾದ ಡಾ. ಕೆ.ಆರ್. ಶ್ರೀಧರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕೋವಿಡ್ ನಿಯಮಗಳಿಗನುಸಾರವಾಗಿ ಅನ್ವಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಡೆಯಲಿದ್ದು, ಕಾರ್ಯಕ್ರಮವನ್ನು ಫೇಸ್‌ಬುಕ್ ಲೈವ್ ಮೂಲಕ https://www.facebook.com/shrivijayakalanikethana.registered ಲಿಂಕ್‌ನಲ್ಲಿ ಆಸಕ್ತರು ವೀಕ್ಷಿಸಬಹುದೆಂದು ಡಾ. ಕೆ.ಎಸ್. ಪವಿತ್ರ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post