ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾದ್ಯಂತ ಅಧಿಕ ಮಳೆಯಾಗುತ್ತಿದ್ದು ತುಂಗಾ ನದಿಯ ಹರಿವು ಅತಿ ಹೆಚ್ಚಾಗಿ ಶಿವಮೊಗ್ಗ ನಗರದ ಗಾಂಧಿಬಜಾರ್ ಭಾಗದ ಕುಂಬಾರಗುಂಡಿ, ಬಿಬಿ ರಸ್ತೆ, ಬಟ್ಟೆ ಮಾರ್ಕೆಟ್ ಭಾಗದ ರಸ್ತೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದ್ದು, ಜಲಾವೃತ ದಿಂದ ಸಂಕಷ್ಟದಲ್ಲಿರುವ ನಾಗರಿಕರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹಾಯ ಹಸ್ತ ಚಾಚಿದರು.
ಮನೆಯಲ್ಲಿರುವ ವಸ್ತುಗಳನ್ನು ಸಾಗಿಸಲು ಟಾಟಾ ಏಸ್ ಮತ್ತು ಟೆಂಪೋ ಗಾಡಿಗಳನ್ನು ವ್ಯವಸ್ಥೆ ಮಾಡಿ ಕಾರ್ಯಕರ್ತರೇ ಬೇರೆಡೆಗೆ ಸಾಗಿಸಿದರು ಹಾಗೂ ಮನೆಗಳಲ್ಲಿರುವ ಹಿರಿಯ ನಾಗರಿಕರು ಹಾಗೂ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಕರೆಂಟ್ ಇಲ್ಲದ ಕಾರಣ ಜನರೇಟರ್ ವ್ಯವಸ್ಥೆ , ರಸ್ತೆಯ ಮೇಲೆ ಹಾಗೂ ಮನೆಗಳಿಗೆ ತುಂಬಿರುವ ನೀರನ್ನು ಸರಾಗವಾಗಿ ಚಲಿಸುವಂತೆ ಮಾಡಲು ಮೋಟರ್ ಗಳ ವ್ಯವಸ್ಥೆಯನ್ನು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್. ಕುಮರೇಶ್ ನೇತೃತ್ವದಲ್ಲಿ ಸಂಕಷ್ಟದಲಿರುವ ಜನತೆಗೆ ನೆರವಾದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ವಿನಯ್ ಐನಾಪುರ್, ಶಕ್ತಿ ಕುಮಾರ್ , ಸುಹಾಸ್ ಗೌಡ , ವೆಂಕಟೇಶ್ ಕಲ್ಲೂರು, ಮಂಜುನಾಥ್ , ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post