ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಜುಲೈ 28ರಂದು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್‌ಆರ್‌ಬಿಆರ್ ಲೇಔಟ್‌ನ ಸಿಎಂಆರ್ ಕಾಲೇಜು ಹತ್ತಿರದ ರಸ್ತೆಯಲ್ಲಿ ರೌಡಿ ಶೀಟರ್ ಹರೀಶ ಆಲಿಯಾಸ್ ಮಿಠಾಯಿ ಎಂಬುವವನನ್ನು ದುಷ್ಕರ್ಮಿಗಳು ಲಾಂಗು ಮತ್ತು ಮಚ್ಚುಗಳಿಂದ ಕೊಚ್ಚಿ, ಸಿಮೆಂಟ್ ಕಲ್ಲನ್ನು ತಲೆಯ ಮೇಲೆ ಎಳೆದು ಕೊಲೆ ಮಾಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಈ ದುಷ್ಕೃತ್ಯದ ಬಗ್ಗೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಇಂದು 5 ಜನ ಕೊಲೆ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಬಂಧನಕ್ಕೆ ಪಡೆದಿದ್ದು ತನಿಖೆ ಮುಂದುವರೆಸಲಾಗಿದೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಪೂರ್ವ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಡಾ. ಎಸ್.ಡಿ. ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ಬಿ. ಸಕ್ರಿ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್. ಸತೀಶ್ ಮತ್ತು ಪಿಎಸ್‌ಐ ನಾಗರಾಜ ನೇದಲಗಿ, ಅನ್ವರ್‌ಖಾನ್, ಅಮರೇಶ್, ಶಹಜಹಾನ್ ಸನದಿ, ಎ.ಎಸ್.ಐ ಪ್ರಕಾಶ್, ಸಿಬ್ಬಂದಿಯವರಾದ ಮಹ್ಮದ್ ರಫಿ, ಅಬ್ದುಲ್ ರಜಾಕ್, ರೇಣುಕಾ ನಾಯ್ಕ, ಮಂಜುನಾಥ, ಬಾಲಾಜಿ, ಆನಂದ, ಅತೀಫ್ ಹುಸೇನ್, ಅಣ್ಣಪ್ಪ, ವಿನೋದ್‌ಕುಮಾರ್, ಮಂಜುನಾಥ, ಸುರೇಶ್ ನಾಗಣ್ಣವರ್, ದರ್ಶನ್ ಅವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post