ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಆಗಸ್ಟ್ ಮೊದಲನೆಯ ವಾರದಲ್ಲಿ ಗೆಳೆಯ – ಗೆಳತಿಯರ ದಿನವನ್ನು ಆಚರಿಸಲಾಗುತ್ತಿತ್ತದೆ. ಪುಟ್ಟ ಪುಟ್ಟ ಮಕ್ಕಳು ಸ್ನೇಹ ದಿನದ ಶುಭಾಶಯಗಳು ಎನ್ನುತ್ತಾ ಇದ್ದ ದೃಶ್ಯ ನಗರದ ಬೀದಿಗಳಲ್ಲಿ ಸಾಮಾನ್ಯವಾಗಿ ಕಂಡು ಬಂತು.
ನನಗೆ ನನ್ನ ಬಾಲ್ಯ ಹಾಗೂ ಕಾಲೇಜಿನ ದಿನಗಳು ನೆನಪಿಗೆ ಬಂತು. ಹಾಗೆಯೇ ನನ್ನ ಹೆಗಲಿಗೆ ಬ್ಯಾಗ್ ನೇತು ಹಾಕಿಕೊಂಡು ಬನಶಂಕರಿ ಮೂರನೇ ಹಂತದ ಇಟ್ಟಮಡುವಿನ ಹಾದಿಯಲ್ಲಿ ಸಾಗುತ್ತಾ ವರದರಾಜ್ ಮಾಲೀಕತ್ವದ ನಂದಿನಿ ಹಾಲಿನ ಕೇಂದ್ರಕ್ಕೆ ಭೇಟಿ ನೀಡಿದಾಗ ಅಚ್ಚರಿಯ ಸಂಗತಿ ಕಾದಿತ್ತು. ಏನೆಂದರೆ ಕಣ್ಣ ಮುಂದೆ ದ್ವಿಚಕ್ರ ವಾಹನ ಸವಾರರು ಬಳಸುವ ಹೆಲ್ಮೆಟ್ ಒಳಗೆ ಜೋಡಿ ಬೆಕ್ಕಿನ ಮರಿ, ಸುಖ ನಿದ್ರೆಗೆ ಜಾರಿದ್ದವು.
ಸ್ನೇಹ ಸಮ್ಮಿಲನ ಪ್ರತಿನಿತ್ಯ ಹೀಗೆಯೇ… ಒಂದೇ ಹೆಲ್ಮಟ್‌ನಲ್ಲಿ ನಿದ್ದೆಗೆ ಜಾರುತ್ತವೆ. ರಾಣಿ ಬೆಕ್ಕಿನ ಎರಡು ಗಂಡು ಮರಿಗಳು ಇವಾಗಿದ್ದು, ಎರಡು ಮರಿಗಳಿಗೂ ರಾಜ ಎಂದು ಹೆಸರು ಇಟ್ಟಿದ್ದಾರೆ.
ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುವ ಸ್ನೇಹಿತರ ದಿನ ಹಾಗೂ ಆಗಸ್ಟ್ 7 ರಂದು ವಿಶ್ವ ಅಂತರ ರಾಷ್ಟ್ರೀಯ ಸ್ನೇಹಿತರ ದಿನ ಆಚರಿಸಲಾಗುತ್ತದೆ. ಆದರೆ ಇಟ್ಟಮಡುವಿನ ನಂದಿನಿ ಹಾಲಿನ ಕೇಂದ್ರದಲ್ಲಿ ಪ್ರತಿ ನಿತ್ಯ ಸ್ನೇಹಿತರ ದಿನ, ಪರಿಶುದ್ಧ ಪ್ರೀತಿ ಹಾಗೂ ಪರಿಶುದ್ದ ಗೆಳತನ ಎಂದರೆ ಇದೆ ಅಲ್ಲವೇ…?
ಚಿತ್ರ-ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post