ನವದೆಹಲಿ, ಅ.5: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ಧಿಷ್ಟ ಗುರಿ ದಾಳಿಯಲ್ಲಿ 7 ಉಗ್ರರ ಕ್ಯಾಂಪ್ಗಳು ಸರ್ವನಾಶವಾಗಿದ್ದು, 40 ಉಗ್ರರು ಸಾವನ್ನಪ್ಪಿದ್ದರು. ಸೇನೆ ನಡೆಸಿದ ನಿರ್ಧಿಷ್ಟ ಗುರಿ ದಾಳಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷ್ಯ ಒದಗಿಸಬೇಕು ಎಂದು ಕೇಳಿದ ನಾಯಕರ ಹೇಳಿಕೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಟಾಂಗ್ ನೀಡಿದ್ದಾರೆ. ಈ ಬಗ್ಗೆ ಯಾರಿಗೂ ನಾವೂ ಸಾಕಷ್ಯ ಒದಗಿಸುವ ಅವಶ್ಯಕತೆ ಇಲ್ಲ ಎಂದು ನಾಯ್ಡು ಹೇಳಿದ್ದಾರೆ.
ಭಾರತೀಯ ಸೇನೆ ನಡೆಸಿದ ಕಾರ್ಯದ ಬಗ್ಗೆ ಸಾಕ್ಷ್ಯ ಕೇಳಿ ಅವಮಾನ ಮಾಡಿದ್ದಾರೆ.
ನಿರ್ಧಿಷ್ಟ ಗುರಿ ದಾಳಿ ಸಂಬಂಧಿಸಿದಂತೆ ಬೇಜವಾಬ್ದಾರಿಯುವ ಹೇಳಿಕೆ ನೀಡಿದವರಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲವೆಂದಿದ್ದಾರೆ.
ಅಲ್ಲದೇ ಕಾಂಗ್ರೆಸ್ ಪಕ್ಷ ಕ್ಕೆ ತಮ್ಮ ನಾಯಕರು ಮಾಡಿದ ತಪ್ಪಿನ ಅರಿವಾಗಿದೆ. ಅಲ್ಲದೇ ಅವರ ಹೇಳಿಕೆಗಳಿಗೆ ಕಾಂಗ್ರೆಸ್ನಲ್ಲೇ ಆಕ್ಷೇಪ ವ್ಯಕ್ತವಾಗಿದೆ. ಆಮ್ ಆದ್ಮಿ ಪಕ್ಷಕ್ಕೂ ಈ ಹೇಳಿಕೆ ಅನ್ವಯವಾಗುತ್ತದೆ ಎಂದು ನಾಯ್ಡು ಹೇಳಿದ್ದಾರೆ. ಇಂತಹ ವಿಚಾರಗಳಲ್ಲಿ ಹುರುಳಿಲ್ಲ ಆದ್ದರಿಂದ ಈ ನಾಯಕರ ಹೇಳಿಕೆಗೆ ನಮ ನಿರ್ಲಕ್ಷ್ಯವೇ ಉತ್ತರ ಎಂದಿದ್ದಾರೆ. ಅಲ್ಲದೇ ದೇಶದಲ್ಲಿರುವ ಯಾವ ಪ್ರಜೆಯೂ ಕೂಡ ಭಾರತೀಯ ಸೇನೆಯ ಕಾರ್ಯದ ಬಗ್ಗೆ ಅನುಮಾನಗಳನ್ನು ಹೊಂದಿಲ್ಲ.ಯೋಧರು ನಡೆಸಿದ ಈ ಕಾರ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿಲ್ಲ. ಆದರೆ ಜವಾಭ್ದಾರಿಯುತ ಸ್ಥಾನದಲ್ಲಿರುವ ನಾಯಕರು ನಿದರ್ಿಷ್ಟ ಗುರಿ ದಾಳಿ ಸಂಬಂಧ ಸಂಶಯ ವ್ಯಕ್ತಪಡಿಸಿ ಬೇಜವಾಬ್ದರಿತನ ಮೆರೆದಿದ್ದಾರೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ನಮ್ಮ ಸೇನೆ ಉಗ್ರರನ್ನು ಸದೆ ಬಡಿಯುವ ಮೂಲಕ ಮಹತ್ ಕಾರ್ಯ ಮಾಡಿದೆ. ಸೇನೆಯ ಬಗ್ಗೆ ಅನುಮಾನಿಸಿದರೆ ನಮ್ಮ ವೀರ ಯೋಧರಿಗೆ ಅವಮಾನ ಮಾಡಿದಂತೆ ಎಂದು ಹೇಳಿದ್ದಾರೆ. ಅಲ್ಲದೇ ಸರ್ವಪಕ್ಷ ಸಭೆಯಲ್ಲಿ ವಿಶೇಷ ಕಾರ್ಯಾಚರಣೆ ಪಡೆ ಮುಖಂಡರಾದ ರಣ ಭೀರ್ ಸಿಂಗ್ ಅವರೇ ಈ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಇನ್ನಾದರೂ ಇವರ ಸಂಶಯದ ನೋಟ ಮುಂದುವರಿದಿದೆ. ನಿರ್ಧಿಷ್ಟ ಗುರಿ ದಾಳಿಗೆ ವಿಶ್ವ ನಾಯಕರಿಂದ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಪಾಕಿಸ್ಥಾನವಷ್ಟೇ ಈ ಘಟನೆಗೆ ಸಾಕ್ಷ್ಯವನ್ನು ಕೇಳುತ್ತಿದ್ದು, ಅವರ ಕುಹಕ ಬುದ್ದಿಯನ್ನು ಮುಂದುವರಿಸಿದೆ. ಅದರಂತೆ ನಮ್ಮ ನಾಯಕರು ವರ್ತಿಸುತ್ತಿದ್ದಾರೆ. ನಮ್ಮ ದೇಶ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಅಷ್ಟೇ ಅಲ್ಲದೆ ದೇಶೂ ಯುದ್ಧವನ್ನು ಭಯಸುವುದಿಲ್ಲ. ಆದೆ ನಮ್ಮ ಮೇಲಿನ ದಾಳಿಗೆ ಸೂಕ್ತ ಉತ್ತರ ನೀಡಿದೇವೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.















