ಕಲ್ಪ ಮೀಡಿಯಾ ಹೌಸ್
ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿ ಶ್ರೀಗಳ 29ನೆಯ ವರ್ಧಂತಿ ಆಗಸ್ಟ್ 13ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 12ರ ರಾತ್ರಿ 8 ಗಂಟೆಗೆ ಎಸ್. ವೆಂಕಟರಾಘವನ್ ಅವರಿಂದ ಆತ್ಮಬೋಧ ಪ್ರವಚನ ನಡೆಯಲಿದೆ.


ಆಗಸ್ಟ್ 13ರಂದು ಮುಂಜಾನೆ 7.30ಕ್ಕೆ ಏಕಾದಶವಾರ ರುದ್ರ ಪಾರಾಯಣ, 8.30ರಿಂದ ವರ್ಧಂತಿ ಪ್ರಯುಕ್ತ ವಿಶೇಷ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.


ಆಗಸ್ಟ್ 15ರಂದು ಮುಂಜಾನೆ 6.30ರಿಂದ 12.30ರವರೆಗೂ ಅಖಂಡ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳನ್ನು ನೀವಿದ್ದಲ್ಲಿಂದಲೇ ಆನ್’ಲೈನ್ ಮೂಲಕ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಬಹುದಾಗಿದೆ.
http://www.youtube.com/SringeriGurubandhava/live

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















