ಕಲ್ಪ ಮೀಡಿಯಾ ಹೌಸ್
ವಿಜಯನಗರ: ಕ್ಷೇತ್ರದ ಶಾಸಕ ಆನಂದ್ ಸಿಂಗ್ ತಮಗೆ ದೊರೆತ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಬಗ್ಗೆ ಅತೃಪ್ತಿ ಹೊಂದಿರುವ ಕಾರಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇಂಧನ ಅಥವಾ ಲೋಕೋಪಯೋಗಿ ಖಾತೆ ನಿಭಾಯಿಸುವ ಅಪೇಕ್ಷೆ ಹೊಂದಿದ್ದ ಆನಂದ್ ಸಿಂಗ್ ಅವರಿಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿತ್ತು. ಇದು ಪ್ರಕಟವಾಗುತ್ತಲೇ ಆನಂದ್ ಸಿಂಗ್ ಅವರು ಮಾಧ್ಯಮಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ತಾವು ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಆನಂದ್ ಸಿಂಗ್ ಅವರೊಂದಿಗೆ ಮುಖ್ಯಮಂತ್ರಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇನ್ನೊಮ್ಮೆ ಚರ್ಚೆ ನಡೆಸುವ ಭರವಸೆಯನ್ನೂ ನೀಡಿದ್ದರು. ಇದರಿಂದ ಸಮಾಧಾನಗೊಳ್ಳದ ಆನಂದ್ ಸಿಂಗ್ ಕಳೆದ ವಾರ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿರುವುದರ ಬಗ್ಗೆ ಮಾಹಿತಿ ತಿಳಿದಿ ಬಂದಿದ್ದು, ತಾವು ನೀಡಿರುವ ಗಡುವಿನೊಳಗೆ ಖಾತೆ ಬದಲಾವಣೆ ಬೇಡಿಕೆ ಈಡೇರಿಸದಿದ್ದರೆ ರಾಜೀನಾಮೆ ಅಂಗೀಕರಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಖಾತೆ ಪ್ರಕಟವಾಗುತ್ತಿದ್ದಂತೆ ತಮಗೆ ದೊರೆತ ಖಾತೆ ಬಗ್ಗೆ ಅತೃಪ್ತಿ ಹೊರಹಾಕಿದ್ದ ಸಚಿವ ಆನಂದ್‌ಸಿಂಗ್ ಆಕ್ರೋಶ ಈಗ ತಾರಕಕ್ಕೇರಿದ್ದು, ಮುಖ್ಯಮಂತ್ರಿಯ ದೂರವಾಣಿ ಕರೆಗೂ ಸಚಿವ ಆನಂದ್ ಸಿಂಗ್ ನಿರ್ಲಕ್ಷ್ಯ ಮಾಡಿರುವ ಸಂಗತಿ ವಿಷಯ ಬಹಿರಂಗವಾಗಿದೆ.
ಈ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತಮ್ಮ ಕಚೇರಿಯ ಮುಂದಿದ್ದ ಶಾಸಕರ ಕಚೇರಿ ಎಂಬ ಫಲಕವನ್ನು ತೆರುವುಗೊಳಿಸಿರುವುದು ಹೊಸ ಬೆಳವಣಿಗೆಯಾಗೆಗೆ ಪುಷ್ಠಿ ನೀಡುವೀತಿದ್ದು, ಸಚಿವ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ಅವರು ರಾಜೀನಾಮೆ ನೀಡುವರೆಂಬ ಸುದ್ದಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post