ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಬಡತನ, ಶೋಷಣೆ, ಅಸಮಾನತೆಗಳನ್ನು ತೀಕ್ಷವಾಗಿ ಚಿತ್ರಿಸಿ ಸಮಾಜದಲ್ಲಿ ಬದಲಾವಣೆ ತರಲು ಸಹಾಯಕವಾಗಿದ್ದ ಕ್ಯಾಮೆರಾಗಳು ಇಂದು ಖಾಸಗೀತನಕ್ಕೆ ಧಕ್ಕೆ ತರುವ ಸಾಧನಗಳಾಗಿ ಬಳಕೆಯಾಗುತ್ತಿರುವುದು ವಿಷಾದನೀಯ ಎಂದು ದಿ ಹಿಂದೂ ಪತ್ರಿಕೆಯ ನಿವೃತ್ತ ಮುಖ್ಯಫೋಟೋಗ್ರಾಫರ್ ಕೆ. ಗೋಪಿನಾಥನ್ ತಿಳಿಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿಶ್ವ ಫೋಟೋಗ್ರಾಫಿ ದಿನದ ಅಂಗವಾಗಿ ಆನ್‌ಲೈನ್ ವೇದಿಕೆಯ ಮೂಲಕ ಆಯೋಜಿಸಿದ್ದ ಸುದ್ದಿ ಛಾಯಾಗ್ರಹಣ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡಿದರು.
ಹಲವು ಕನ್ನಡ ಮತ್ತು ಇಂಗ್ಲೀಷ್ ದಿನಪತ್ರಿಕೆಗಳಿಗೆ ತಾವು ಕರ್ತವ್ಯದ ಅವಧಿಯಲ್ಲಿ ತೆಗೆದಿದ್ದ ಸುದ್ದಿ ಚಿತ್ರಗಳನ್ನು ತೋರುತ್ತಾ ಬಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ, ನಗರಪಾಲಿಕೆಗಳ ಕಸ ವಿಲೇವಾರಿ ನಿರ್ಲಕ್ಷ್ಯ, ಬೆಂಗಳೂರಿನ ರೇಲ್ವೇ ನಿಲ್ದಾಣದಲ್ಲಿ ಮಹಿಳೆಯರಿಗೆ ಶೌಚಾಲಯವೇ ಇಲ್ಲದ ಸ್ಥಿತಿ, ರಾಜಕಾರಣಿಗಳ ಬಡತನ ನಿರ್ಮೂಲನೆಯ ಸೋಗಲಾಡಿತನದ ಪ್ರಚಾರಗಳನ್ನು ಚಿತ್ರಿಸಿ ಸಮಾಜದ ಓರೆ-ಕೋರೆಗಳನ್ನು ಸರಿಪಡಿಸಲು ಕ್ಯಾಮೆರಾಗಳು, ಸುದ್ದಿಛಾಯಾಗ್ರಹಕರಿಗಿರುವ ಸಾಮರ್ಥ್ಯವನ್ನು ಮೆಲುಕು ಹಾಕಿದರು.
ತಾಂತ್ರಿಕ ಬೆಳವಣಿಗೆಯಿಂದಾಗಿ ಇಂದು ಕ್ಯಾಮೆರಾಗಳು ಎಲ್ಲರ ಕೈಗೂ, ಎಲ್ಲ ಗಾತ್ರಗಳಲ್ಲಿಯೂ, ಮೊಬೈಲ್‌ಗಳಲ್ಲಿಯೂ ದೊರೆಯುತ್ತಿರುವ ಪರಿಣಾಮ ಏನೆಂದರೆ ಸಾರ್ವಜನಿಕರ ಖಾಸಗೀತನಕ್ಕೆ ಧಕ್ಕೆಯಾಗಿದೆ, ಮಾನವೀಯತೆ ಮರೆಗೆ ಸರಿದಿದೆ. ಅಪಘಾತಗಳಾದಾಗ ಜನರು ವಿಡಿಯೋ ತೆಗೆಯುವುದು, ಸಿಸಿಟಿವಿ, ರಹಸ್ಯ ಕ್ಯಾಮೆರಾಗಳಿಂದ ಸೆಲೆಬ್ರಿಟಿಗಳ, ಮಹಿಳೆಯರ ಖಾಸಗೀತನ ಅಪಾಯಕ್ಕೊಳಗಾಗಿದೆ. ಅಪರಾಧಗಳ ಚಿತ್ರಣಕ್ಕೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತಿದೆ. ಕಾಡುಗಳಿಗೆ ನುಗ್ಗಿ ಪ್ರಾಣಿಗಳ ಸಹಜ ಓಡಾಟಕ್ಕೆ ತೊಂದರೆ ನೀಡುತ್ತಿರುವ ಪ್ರವೃತ್ತಿ ಬೆಳೆದಿದೆ. ತಂತ್ರಜ್ಞಾನವನ್ನು ಮಾನವೀಯವಾಗಿ, ಸಮಾಜದ ಸಕರಾತ್ಮಕ ಬದಲಾವಣೆಗಾಗಿ ಬಳಸದೆಹೋಗುತ್ತಿರುವುದು ಅಘಾತಕಾರಿ ಎಂದರು.
ಉಪನ್ಯಾಸದ ನಂತರ ನಡೆದ ಸಂವಾದದಲ್ಲಿ ಸುದ್ದಿ ಛಾಯಾಗ್ರಹಕರು ಯಾವುದೇ ಪಕ್ಷ, ವರ್ಗಗಳ ಪರವಹಿಸಬಾರದು, ಹೊಸತನ್ನು ಹುಡುಕುವ ಮನೋಭಾವ ಹೊಂದಿರಬೇಕು, ಬದಲಾಗುವ ನೈತಿಕ ನಿಲುವುಗಳನ್ನು ಸಮತೋಲನಗೊಳಿಸುವ ಬಗೆ, ಪೋಲೀಸ್, ದಾಷ್ಟ್ಯ ರಾಜಕಾರಣಿಗಳ ನಡುವೆ ನ್ಯಾಯದ ಪರ ಛಾಯಾಚಿತ್ರಗಳನ್ನು ತೆಗೆಯುವ ಸವಾಲುಗಳ ಬಗೆಗೆ ಅವರು ವಿವರಿಸಿದರು.
ಈ ಸಂದರ್ಭದಲ್ಲಿ ವಿಭಾಗದ ಅಧ್ಯಕ್ಷ ಡಾ. ಸತೀಶ್‌ಕುಮಾರ, ಪ್ರೊ. ಪೂರ್ಣಾನಂದ, ಪ್ರೊ. ವರ್ಗೀಸ್, ಡಾ. ಸತ್ಯಪ್ರಕಾಶ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಪತ್ರಿಕಾ ಆಸಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post