ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲ್ಲೂಕು, ಹೊಳೆಹೊನ್ನೂರು ಬಳಿಯ ಅರಹತೊಳಲು ಗ್ರಾಮದಲ್ಲಿ ಶ್ರಾವಣ ಶುಕ್ರವಾರದ ಇಂದು ಗ್ರಾಮದೇವತೆ ಕೆಂಚಾಂಬಿಕ ದೇವಿಯ ನೂತನ ದೇವಸ್ಥಾನ ಪ್ರವೇಶ, ಕಳಸಾರೋಹಣ ಹಾಗೂ ದೇವಿಯ ಪ್ರತಿಷ್ಟಾಪನೆ ವೈಭವದಿಂದ ನಡೆಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಸ್ಥರು ನಿರ್ಮಿಸಿರುವ ನೂತನ ದೇಗುಲಕ್ಕೆ ಭವ್ಯ ಅಲಂಕಾರ ಮಾಡಲಾಗಿತ್ತು. ನಿನ್ನೆ ಸಂಜೆಯಿಂದ ರಾತ್ರಿಯಿಡೀ ಹೋಮ, ಹವನ, ಗಣಹೋಮ ವಾಸ್ತು ಹೋಮ, ದುರ್ಗಾ ಹೋಮ, ಗೃಹಪ್ರವೇಶ, ದೇವಿಯ ಪ್ರತಿಷ್ಟಾಪನೆ, ಗ್ರಾಮ ದೇವರುಗಳ ಮೆರವಣಿಗೆ ನಡೆಯಿತು. ಬಿಳಕಿ ಶ್ರೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.


ಇಂದು ಬೆಳಗಿನ ಜಾವದಿಂದ ಗ್ರಾಮಸ್ಥರು ಶ್ರದ್ದೆ ಭಕ್ತಿಯಿಂದ ಸೇರಿದ್ದು, ಕೊರೋನಾ ನಿಯಮದ ಪಾಲನೆ ಜೊತೆಗೆ ಕಳಸಾರೋಹಣ, ತಾಯಿಯ ಪೂಜೆಯಲ್ಲಿ ಪಾಲ್ಗೊಂಡಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















