ಕಲ್ಪ ಮೀಡಿಯಾ ಹೌಸ್
ಸೊರಬ: ಇಲಾಖೆಯೊಂದರಿಂದಲೇ ನೈಸರ್ಗಿಕ ಸಂಪತ್ತನ್ನು ಉಳಿಸಲು ಸಾಧ್ಯವಾಗದು, ನಮ್ಮೊಂದಿಗೆ ಸ್ಥಳೀಯ ನಾಗರಿಕರೂ ಸಹಕಾರ ನೀಡಲು ಮುಂದಾದಾಗ ಮಾತ್ರ, ನೈಸರ್ಗಿಕ ಪರಿಸರವನ್ನು ಉಳಿಸಿ ಬೆಳೆಸಬಹುದಾಗಿದೆ ಎಂದು ತಾಲ್ಲೂಕು ಸಾಮಾಜಿಕ ಅರಣ್ಯ ವಲಯದ ಅಧಿಕಾರಿ ಸಂಜಯ ತರಿಕೆರೆ ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ತಾಲ್ಲೂಕು ಉಳವಿ ಹೋಬಳಿ ಬರಿಗೆ ಗ್ರಾಮದಲ್ಲಿ ಅರಣ್ಯ ಇಲಾಖೆ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವೃಕ್ಷಾರೋಪಣ ಸಮಾರಂಭವನ್ನುದ್ಧೇಶಿಸಿ ಮಾತನಾಡಿದರು.


ಪರಿಸರ ತಜ್ಞ ಹೊಸಬಾಳೆ ಮಂಜುನಾಥ ಹೆಗಡೆ, ಮಾನವ ಜೀವಿಯು ತ ಬದುಕಿನ ಆಸೆಯ ಸ್ವಾರ್ಥ ಮನೋಭಾವದ ಧೋರಣೆಯಿಂದ ನೈಸರ್ಗಿಕ ಸಂಪತ್ತನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅರಣ್ಯ ಸಂಪತ್ತು ಬರಿದಾಗುತ್ತಿದೆ. ಆ ಮೂಲಕ ಜೀವವಿಧದ ಸೂಕ್ಷ್ಮ ಮಾನವೋಪಯೋಗಿ ಜೀವಿಗಳು ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಉಳಿಸಿ, ಬೆಳೆಸಿ ಕೃಷಿಯಲ್ಲಿ ರಾಸಾಯನಿಕ ಕಡಿಮೆ ಬಳಸಿ ಎಂದರು.


ತಾಲ್ಲೂಕು ಆರ್‌ಎಫ್‌ಒ ಪ್ರಭುರಾಜ್ ಪಾಟೀಲ್, ಕಾಡಿನ ರಕ್ಷಣೆಯಲ್ಲಿ, ಆಯಾ ಪ್ರಾದೇಶಿಕ ವಲಯದಲ್ಲಿ ಸ್ಥಳೀಯರು ಪ್ರಮುಖ ಪಾತ್ರ ವಹಿಸಬೇಕು. ಅರಣ್ಯ ಇಲಾಖೆ ಇಂತವರಿಗೆ ಬೆಂಬಲಕ್ಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಎನ್.ಸಿ. ರಾವ್ ಬರಿಗೆ ವಹಿಸಿದ್ದರು. ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಬಿ. ವೆಂಕಟಗಿರಿ ಬರಿಗೆ, ಶಿವರಾಂ ಕಂಚಿ, ಗ್ರಾ.ಪಂ. ಸದಸ್ಯ ಎಂ.ಬಿ ಪುಟ್ಟಪ್ಪ, ಗಣಪತಿ, ನಾಗರಾಜ್, ಶ್ರೀಧರ ಭಟ್, ತಿಮ್ಮಪ್ಪ ಬಿ.ಆರ್. ಸಂದೇಶ್, ಅಮೃತ ರಾವ್, ಶಾಲಿನಿ, ಅಶ್ವಿನಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರಿದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















