ಕಲ್ಪ ಮೀಡಿಯಾ ಹೌಸ್
ಬೀದರ್: ದೇವರ ಕೆಲಸ ಕಾರ್ಯಗಳು ಯಾವತ್ತು ನಿಲ್ಲುವುದಿಲ್ಲ. ದೇವರು ಯಾರ್ಯಾರಿಂದ ಏನೇನು ಕೆಲಸಗಳನ್ನು ಮಾಡಿಸಿಕೊಳ್ಳಬೇಕು, ಆ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ. ನಾವು ಕೂಡ ಅಂತಹ ಪುಣ್ಯದ ಕೆಲಸಗಳನ್ನು ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಚಿಂತನಗೇರಾ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿ (ಗುದ್ದಲಿ) ಪೂಜೆ ನೇರವೇರಿಸಿ ಮಾತನಾಡಿದ ಅವರು, ನೀವೆಲ್ಲರೂ ಸಂಕಲ್ಪ ಮಾಡಿ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಿಸಿದ್ದಿರಿ. ಆ ಕೆಲಸಕ್ಕೆ ನಾನು ಕೂಡ ವೈಯಕ್ತಿಕ ಧನಸಹಾಯ ಮಾಡುತ್ತೇನೆ. ಶಾಸಕರ ನಿಧಿಯಲ್ಲಿ ಸಹ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ.
ನಾವ್ಯಾರು ಕೂಡ ದೊಡ್ಡವರಲ್ಲ. ಯಾರ ಕೈಯಿಂದ ಏನು ಕೆಲಸ ಮಾಡಿಸಿಕೊಳ್ಳಬೇಕು. ಆ ಕೆಲಸಗಳನ್ನು ದೇವರು ಮಾಡಿಸಿಕೊಳ್ಳುತ್ತಾನೆ. ಪುಣ್ಯದ ಕೆಲಸಗಳಿಗೆ ನಾವೆಲ್ಲರೂ ಸಾಧ್ಯವಾದಷ್ಟು ಕೈಜೋಡಿಸುವ ಕೆಲಸ ಮಾಡೋಣ. ಇಲ್ಲಿರುವ ಭೀರಲಿಂಗೇಶ್ವರ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನಾನು ಕೂಡ ಇಲ್ಲಿಗೆ ಅನೇಕ ಸಲ ಭೇಟಿ ನೀಡಿದ್ದಿನಿ. ಅನೇಕ ವರ್ಷಗಳಿಂದ ಇಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಆದಷ್ಟು ಬೇಗ ನಾವೆಲ್ಲರೂ ಸೇರಿ ದೇವಸ್ಥಾನ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸೋಣ. ಯಾರ್ಯಾರಿಂದ ಏನೇನು ಸಹಾಯ ಸಹಕಾರ ಮಾಡಲು ಸಾಧ್ಯವಾಗುತ್ತದೆ ಅವರೆಲ್ಲರೂ ಸಹಾಯ ಸಹಕಾರ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆನಂದ್ ಕುಮಾರ್, ಕುಲಕರ್ಣಿ, ರಾಮರೆಡ್ಡಿ, ಶ್ರೀನಿವಾಸ್ ರೆಡ್ಡಿ, ಸಿದ್ದು, ಮಾರುತಿ, ಚಾಮಣ್ಣ, ಗಡ್ಡಬೋರ ರಾಮಣ್ಣ, ರಘುನಾಥ್, ಮಲ್ಲಪ್ಪ, ಸಂಜು, ಅಶೋಕ, ಸಿದ್ದು, ವಿನಾಯಕ ಮಹರಾಜ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post