ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಚಿತ್ರೀಕರಣಕ್ಕಾಗಿ ನಟ ಪುನೀತ್ ರಾಜ್‌ಕುಮಾರ್ ಸಕ್ರೆಬೈಲು ಆನೆ ಬಿಡಾರಕ್ಕೆ ಬೇಟಿ ನೀಡಿದ್ದು, ಒಪನ್ ಜೀಪ್‌ನಲ್ಲಿ ಬಂದು ಆನೆಗಳನ್ನ ಮುದ್ದಾಡುವ ದೃಶ್ಯ ಸೆರೆ ಹಿಡಿಯಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕುಂತಿ ಹಾಗೂ ಧನುಷ್ ಆನೆಗೆ ಆಹಾರ ನೀಡುವ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಮಾಧ್ಯಮದವರು ಮತ್ತು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ತಮ್ಮ ನೆಚ್ಚಿನ ನಟನ ದರ್ಶನಕ್ಕಾಗಿ ಅಭಿಮಾನಿಗಳು ಹರಸಾಹಸಪಡುತ್ತಿದ್ದುದು ಕಂಡುಬಂದಿತು.
ಪರಿಸರದ ಕಾಳಜಿ ಬಗೆಗಿನ ಡಾಕ್ಯುಮೆಂಟರಿಗಾಗಿ ಪುನೀತ್ ಉಚಿತವಾಗಿ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸುಮಾರು 3 ಗಂಟೆಯ ವೇಳೆಗೆ ಪ್ರವೇಶ ದ್ವಾರದ ಬಳಿ ಬಂದ ನಟ ಪುನೀತ್ ಖಾಸಗಿ ಶೂಟಿಂಗ್‌ಗಾಗಿ ಬಂದಿದ್ದೇನೆ. ಕೊರೋನಾ ಹಿನ್ನಲೆಯಲ್ಲಿ ಮಾತನಾಡುವುದಿಲ್ಲವೆಂದು ಪುನೀತ್ ಸ್ಪಷ್ಟಪಡಿಸಿದರು. ನಂತರ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post