ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ತೋರಿಸಿ ಭಯ ಹುಟ್ಟಿಸಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರೇ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗಾಂಧಿನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ನಗರದ ರವೀಂದ್ರನಗರ ಪ್ರಸನ್ನಗಣಪತಿ ದೇವಸ್ಥಾನದ ಬಳಿ ಕಾರಿನಲ್ಲಿ ಬಂದ ನಾಲ್ವರು ವಾಕಿಂಗ್‌ಗೆ ಬಂದವರಿಗೆ ಮಾರಕಾಸ್ತ್ರಗಳನ್ನು ತೋರಿಸಿ ರಾಬರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿದ್ದ ಕೆಲ ಯುವಕರು ಚಾಣಾಕ್ಷ ತನದಿಂದ ಅವರನ್ನು ಹಿಡಿಯಲು ಧೈರ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯುವಕರ ಗುಂಪಿಗೆ ಹೆದರಿದ ರಾಬರಿ ಮಾಡಲು ಬಂದ ಗುಂಪು ಅಲ್ಲಿಂದ ಪರಾರಿಯಾಗಿದ್ದಾರೆ.
ಗಾಂಧಿ ನಗರ 2ನೇ ತಿರುವಿನಲ್ಲಿರುವ ಮನೆಯಲ್ಲಿ ಅವಿತುಕೊಳ್ಳಲು ಯತ್ನಿಸಿದ ಗುಂಪನ್ನು ಯುವಕರು ಬೆನ್ನಟ್ಟಿ ಹಿಡಿದಿದ್ದಾರೆ. ಹಾಗೂ ಇದರಲ್ಲಿ ಒಬ್ಬ ಕಾರನ್ನು ಬಿಟ್ಟು ಅಲ್ಲೇ ಬಿಟ್ಟ ಪರಾರಿ ಆಗಿದ್ದಾನೆ.
ಜಯನಗರ ಪೊಲೀಸರಿಗೆ ಮಾಹಿತಿ ತಿಳಿಸಿದ ನಂತರ ಘಟನಾ ಸ್ಥಳಕ್ಕಾಗಮಿಸಿ, ಸೆರೆ ಸಿಕ್ಕ ಮೂವರನ್ನ ಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಘಟನೆಯಲ್ಲಿ ಪಾಲ್ಗೊಂಡ ಮೂವರು ಸ್ಥಳೀಯ ವ್ಯಕ್ತಿಗಳಾಗಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post