ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎರಡೂವರೆ ಕೋಟಿ ಅನುದಾನದಲ್ಲಿ ನಗರದಲ್ಲಿ ಅದ್ದೂರಿಯಾಗಿ ದಸರಾ ಆಚರಿಸುವುದಕ್ಕೆ ಮಲೆನಾಡು ಕೇಸರಿ ಪಡೆ ವಿರೋಧ ವ್ಯಕ್ತಪಡಿಸಿದೆ.
ಗಣಪತಿ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದರಿಂದ ಕೊರೋನ ಹರಡುತ್ತದೆ ಎಂಬ ತಜ್ಞರ ವರದಿಯನುಸಾರ ಸರ್ಕಾರ ನಿಯಮ ರೂಪಿಸಿದ ಹಿನ್ನೆಲೆ ಸರಳವಾಗಿ ಗಣೇಶ ಹಬ್ಬ ಆಚರಿಸಲಾಯಿತು. ಆದರೆ ಮುಂಬರುವ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಯೋಚನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ.
ಪ್ರಧಾನಿ ಮೋದಿ ಅವರು 9 ದಿನಗಳ ಕಾಲ ಉಪವಾಸ ಮಾಡಿ ನವರಾತ್ರಿ ಆಚರಣೆ ಮಾಡುತ್ತಾರೆ. ಅವರನ್ನು ಮಾದರಿಯನ್ನಾಗಿಸಿಕೊಂಡು ಒಂದು ದಿನವಾದರೂ ಉಪವಾಸ ಇದ್ದು ಶ್ರದ್ಧಾಭಕಿಯಿಂದ ದಸರಾ ಆಚರಿಸೋಣ ಎಂದು ಮಲೆನಾಡು ಕೇಸರಿ ಪಡೆ ಸಲಹೆ ನೀಡಿದೆ.
ಎರಡೂವರೆ ಕೋಟಿ ಅನುದಾನದಲ್ಲಿ ಅದ್ದೂರಿಯಾಗಿ ದಸರಾ ಆಚರಿಸುವ ಬದಲು ಸರಳವಾಗಿ ಆಚರಿಸಿ, ಆ ಹಣವನ್ನ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಿ ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post