ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ನಿನ್ನೆ ಲಸಿಕಾ ಮೇಳದ ನಿಮಿತ್ತ 70,000 ಲಸಿಕೆ ವಿತರಿಸುವ ಗುರಿಯನ್ನು ಹೊಂದಿ, 50,793 ಲಸಿಕೆ ವಿತರಿಸುವ ಮೂಲಕ ಶೇಕಡ 73ರಷ್ಟು ಗುರಿಯನ್ನು ತಲುಪಿ ರಾಜ್ಯದಲ್ಲೇ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಇದುವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 14,64,308 ಡೋಸ್ ಲಸಿಕೆ ವಿತರಣೆ ಯಾಗಿದ್ದು, 10,43,701 ಮೊದಲನೇ ಹಾಗೂ 4,20,607 ದ್ವಿತೀಯ ಡೋಸ್ ಗಳಷ್ಟು ಲಸಿಕಾಕರಣಗೊಂಡಿದೆ.
ಲಸಿಕೆ ವಿತರಣೆಯಲ್ಲಿ ಶಿವಮೊಗ್ಗ ವೇಗ ಪಡೆದುಕೊಳ್ಳುತ್ತಿದೆ, ಲಸಿಕಾಕರಣ ದಲ್ಲಿ ಹೊಸ ಹೊಸ ದಾಖಲೆ ಸೃಷ್ಟಿಸುತ್ತಿದೆ. ಶಿವಮೊಗ್ಗ ಜಿಲ್ಲೆಯನ್ನು “ಲಸಿಕಾ ಯುಕ್ತ ಕರೋನ ಮುಕ್ತ” ಜಿಲ್ಲೆಯನ್ನಾಗಿಸಲು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ರವರಿಗೆ, ಆರೋಗ್ಯಾಧಿಕಾರಿಗಳಾದ DHO ಡಾ. ರಾಜೇಶ್ ಸುರಗಿಹಳ್ಳಿ, RCHO ಡಾ. ನಾಗರಾಜ್ ನಾಯ್ಕ್ ರವರಿಗೆ, ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ವೈದ್ಯಧಿಕಾರಿಗಳು, ದಾದಿಯರು, ಕಂಪ್ಯೂಟರ್ ಆಪರೇಟರ್ಸ್ ಗಳಿಗೆ, ನಮ್ಮ ಲಸಿಕಾ ಅಭಿಯಾನದ ಪ್ರಮುಖರಿಗೆ, ಎಲ್ಲಾ ತಾಲೂಕು ತಂಡದ ಕಾರ್ಯಕರ್ತರಿಗೆ ಹಾಗೂ ಜಿಲ್ಲೆಯ ಸಮಸ್ತ ಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಎಸ್. ದತ್ತಾತ್ರಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post