ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಅವ್ವ (ಬರಿ ಹಡೆದವಳಲ್ಲ) ಎಂಬ ಕಿರುಚಿತ್ರವನ್ನು ಚಲನಚಿತ್ರ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ (ಡೆಡ್ಲಿ) ಬಿಡುಗಡೆಗೊಳಿಸಿದರು.
ಅವರು ಡಾ.ವಿಷ್ಣುಸೇನಾ ಸಮಿತಿ ಧಾರವಾಡ ಜಿಲ್ಲಾ ಘಟಕ ಹುಬಳ್ಳಿ ಅವರು ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿ ನಂತರ ಮಾತನಾಡಿ ಅವ್ವ ಎಂಬುದು ಬಹಳ ಅಪ್ಯಾಯಮಾನವಾಗಿದೆ. ತಾಯಿ ಮಮತೆ ಯಾವುದಕ್ಕೂ ಹೋಲಿಸಲಾಗದು, ಬಣ್ಣಿಸಲಂತೂ ಸಾಧ್ಯವಿಲ್ಲ. ಇಂತಹ ಅವ್ವ ಎಂಬುವಳ ಬಗ್ಗೆ ಮೂಡಿಬಂದ ಕಿರುಚಿತ್ರ ಎಲ್ಲರ ಮನ ತಲುಪಲಿ ಎಂದು ಶುಭ ಹಾರೈಸಿದರು.

ಉತ್ತರ ಕರ್ನಾಟಕದವರೇ ಅದ ಚಲನಚಿತ್ರದ ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ(ಪಾಂಡು) ಮಾತನಾಡಿ, ಅವ್ವನ ಹೆಸರಿನಲ್ಲಿ ಎಷ್ಟು ಸಿನಿಮಾ ತೆಗೆದರೂ ಮುಗಿಯದ ವಿಷಯ. ಅವ್ವ ಎಂದರೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿ ಉತ್ತರ ಕರ್ನಾಟಕದ ಕಲಾವಿದರೇ ಅಭಿನಯಿಸಿದ ಈ ಕಿರುಚಿತ್ರ ಯಶಸ್ವಿಯಾಗಲಿ. ಇನ್ನೂ ಇಲ್ಲಿರುವ ಹಲವಾರು ಕಲಾವಿದರಿಗೆ ಅವಕಾಶಗಳು ಸಿಕ್ಕು ಅವರ ಪ್ರತಿಭೆ ಹೊರಹೊಮ್ಮುವಂತಾಗಲಿ ಎಂದು ಶುಭಕೋರಿದರು.
ತಾಯಿಯನ್ನು ಕಳೆದುಕೊಂಡ ಇಬ್ಬರು ಮೊಮ್ಮಕ್ಕಳನ್ನು ಜೋಪಾನ ಮಾಡಿದ ಅಜ್ಜಿ ತಾಯಿ ವಾತ್ಸಲ್ಯವನ್ನು ಮೊಮ್ಮಕ್ಕಳಿಗೆ ನೀಡಿದಳು. ಕೊರೊನಾದ ದಿನಗಳಲ್ಲಿ ವ್ಯಾಕ್ಸಿನ್ ಪಡೆಯಬೇಕು ಎಂದು ಮೊಮ್ಮಗ ಹೇಳುತ್ತಾನೆ. ಅನಕ್ಷರಸ್ಥ ಹಿರಿಯ ಮೊಮ್ಮಗ ವ್ಯಾಕ್ಸಿನ್ ಬೇಡ ಎನ್ನುತ್ತಾರೆ. ಮೂಢರ ಮಾತು ಕೇಳಿ ವ್ಯಾಕ್ಸಿನ್‌ದಿಂದ ಸಾಯುತ್ತಾರೆ ಎಂಬ ಮಾತು ನಂಬಿ ಬಿಡುತ್ತಾನೆ. ಅವ್ವಗ ವ್ಯಾಕ್ಸಿನ್ ಬೇಡೆಂಬ ನಿರ್ಧಾರಕ್ಕೆ ಬರುತ್ತಾನೆ. ದೇವರಿಗೆ ಹರಕೆ ಹೊತ್ತಿರುವೆ ಏನು ಆಗಲ್ಲ ಎಂದು ನಂಬುತ್ತಾನೆ. ನಂತರದ ದಿನಗಳಲ್ಲಿ ಅವ್ವಗ ಕೆಮ್ಮು ಶುರುವಾಗುತ್ತದೆ. ಮುಂದಿನ ವಿಷಯವನ್ನು ಚಿತ್ರದಲ್ಲಿ ನೋಡಬಹುದು. ಕತೆಯ ಕೊನೆಗೆ ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಸಿ ಅರುಣಕುಮಾರ ಅವರು ಲಸಿಕೆ ಮಹತ್ವ ಕುರಿತು ಒಂದಿಷ್ಟು ಮಾತುಗಳನ್ನು ಹೇಳಿ ಕತೆಗೆ ಮೆರುಗು ನೀಡಿದ್ದಾರೆ.

ಕತೆ ಬರೆದು ನಿರ್ಮಾಣದ ಹೊಣೆಯನ್ನು ಮೃತ್ಯುಂಜಯ ಹಿರೇಮಠ ಹೊತ್ತಿದ್ದಾರೆ. ವಿಕ್ರಂ ಕುಮಟಾ ಅವರು ಚಿತ್ರಕತೆ, ಸಂಭಾಷಣೆ ಜತೆಗೆ ನಿರ್ದೇಶನ ಮಾಡಿದ್ದಾರೆ. ಪ್ರಚಾರಕಲೆ ಡಾ. ಪ್ರಭು ಗಂಜಿಹಾಳ,ಡಾ. ವೀರೇಶ್ ಹಂಡಿಗಿ ಅವರದು ಇದೆ. ಬಸವರಾಜ ಇಂಚಲ ಅವರ ಛಾಯಾಗ್ರಹಣ, ಕೃಷ್ಣ ಪಂತ ಅವರು ಸಂಕಲನ ಮಾಡಿದ್ದಾರೆ. ಪಾತ್ರ ವರ್ಗದಲ್ಲಿ ಮಾಸ್ಟರ್ ಶ್ರವಣ ಹಿರೇಮಠ, ರೇಖಾ ಹೊನವಾಡ, ವೆಂಕಟೇಶ ಭಂಡಾರಿ, ಮಹೇಶ ಚೌಕಿಮಠ ಉತ್ತಮವಾಗಿ ನಟಿಸಿದ್ದಾರೆ. ಧಾರವಾಡ ಜಿಲ್ಲಾ ಡಾ.ವಿಷ್ಣು ಸೇನಾ ಸಮಿತಿ ಈ ಕಿರುಚಿತ್ರವನ್ನು ಅರ್ಪಿಸಿದ್ದು. ಈ ಕಿರು ಚಿತ್ರವನ್ನು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನಲ್ ನಲ್ಲಿ ಸದ್ದು ಮಾಡುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















