ಕಲ್ಪ ಮೀಡಿಯಾ ಹೌಸ್ | ಸಾಗರ |
10ಎಂವಿಎ ಶಕ್ತಿ ಪರಿವರ್ತಕವನ್ನು ತೆಗೆದು 20 ಎಂವಿಎ ಶಕ್ತಿ ಪರಿವರ್ತಕವನ್ನು ಅಳವಡಿಸುವ ಕಾಮಗಾರಿಯಲ್ಲಿ ಎನ್‌ಇಎಫ್‌ಪಿಇಎಸ್‌ನ್ನು ಚಾಲನೆಗೊಳಿಸಲು ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಶಿವಮೊಗ್ಗ ರವರುಮಾರ್ಗಮುಕ್ತತೆಯನ್ನು ಪಡೆಯುವುದರಿಂದ ಅ.27ರ ಬುಧವಾರದಂದು 110/33/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಾಗರದಿಂದ ಸರಬರಾಜಾಗುವ ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಎಫ್-1 ಸಾಗರ ಟೌನ್, ಎಫ್-7, ಇಂಡಸ್ಟ್ರಿಯಲ್, ಎಫ್-9 ಆರ್.ಎಮ್.ಸಿ, ಎಫ್-11 ಎಸ್.ಎನ್.ನಗರ ಹಾಗೂ ಗ್ರಾಮಾಂತರ ಫೀಡರ್‌ಗಳಾದ ಎಫ್-2 ಮಾಲೈ, ಎಫ್-3 ಹೆಗ್ಗೋಡು, ಎಫ್-4 ಆವಿನಹಳ್ಳಿ, ಎಫ್-5 ವರದಳ್ಳಿ, ಎಫ್-6 ಮಾಸೂರು, ಎಫ್-8 ಬೊಮ್ಮ, ಎಫ್-12 ಹಿರೇನೆಲ್ಲೂರು ಮಾರ್ಗಗಳ ಆವಿನಹಳ್ಳಿ, ಭೀಮನಕೋಣೆ, ಕಲ್ಮನೆ, ಹೆಗ್ಗೋಡು, ಕೋಳೂರು, ಯಡಜಿಗಳೆಮನೆ, ಖಂಡಿಕಾ, ಭೀಮನೇರಿ, ಪಡವಗೋಡು, ನಾಡಕಲಸಿ, ಹಿರೇನಲ್ಲೂರು, ಕೆಳದಿ, ಮಾಸೂರು, ಮತ್ತು ಮಾಲೈ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5:30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post