ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನ.12ರಂದು ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.
ರೋ ಸುಬ್ರಾವ್ ಕಾಸರಕೋಡ ಮೆಮೋರಿಯಲ್ ಶಿರಸಿ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಶಿವಮೊಗ್ಗ, ಸಾರ್ವಜನಿಕ ಆಸ್ಪತ್ರೆ, ಲಯನ್ಸ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ ಸೊರಬ ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದ್ದು, ನೇತ್ರತಜ್ಞರಾದ ಡಾ. ಎ.ಜಿ. ವಸ್ತ್ರದ, ಡಾ. ಆದಿತ್ಯ ಫಡ್ನೀಸ್ ಅವರನ್ನೊಳಗೊಂಡ ತಂಡ ಬೆಳಿಗ್ಗೆ 10ರಿಂದ 1ರವರೆಗೆ ಕಣ್ಣಿನ ತಪಾಸಣೆ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ವೈದ್ಯಾಧಿಕಾರಿಗಳಾದ ಡಾ. ವಿನಯ ಪಾಟೀಲ್ (ಮೊ: 9901559781), ಡಾ. ಎಂ.ಕೆ. ಭಟ್ (ಮೊ: 9448582695), ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶ್ವೇತಾ (ಮೊ: 8660484500), ಪ್ರತಿಭಾ ಗೋಖಲೆ (ಮೊ: 8762278907), ಹರೀಶ್ ಬಾಬು, ನೇತ್ರ ತಪಾಸಣಾಧಿಕಾರಿಗಳಾದ (ಮೊ: 9535671460), ಹೆಚ್.ಎಂ. ಪ್ರತಿಮಾ (ಮೊ: 8105616492)ಗೆ ಸಂಪರ್ಕಿಸಬಹುದು.
ಸೊರಬ ಮತ್ತು ಸುತ್ತಮುತ್ತಲಿನ ಕಣ್ಣಿನ ಪೊರೆಯ ತೊಂದರೆ ಉಳ್ಳವರು ಈ ಶಿಬಿರದ ಪ್ರಯೋಜನ ಪಡೆಯಬೇಕಾಗಿ ಕೋರಲಾಗಿದೆ.
ವಿಶೇಷ ಸೂಚನೆಗಳು:
- ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ರೋಟರಿ ಚಾರಿಟೆಬಲ್ ಆಸ್ಪತ್ರೆ ಶಿರಸಿಯಲ್ಲಿ ಮಾಡಲಾಗುವುದು.
- ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಿಗೆ ತಜ್ಞ ವೈದ್ಯರ ಸಲಹೆಯಂತೆ ಉಚಿತ ಲೆನ್ಸ್ ಅಳವಡಿಸಲಾಗತ್ತದೆ. ಹಾಗೂ ಊಟ, ವಸತಿ, ಸಾರಿಗೆ ವ್ಯವಸ್ಥೆ ಉಚಿತವಾಗಿ ನೀಡಲಾಗುತ್ತದೆ.
- ಶಿಬಿರಕ್ಕೆ ಬರುವವರು ಶುದ್ಧವಾಗಿ ಮುಖ ಕ್ಷೌರ ಮಾಡಿಕೊಂಡು, ಸ್ವಚ್ಛವಾದ ಬಟ್ಟೆಯನ್ನು ಧರಿಸಿಕೊಂಡು ಬರಬೇಕು. ಮತ್ತು ನಿತ್ಯ ಬಳಕೆಯ ವಸ್ತುಗಳನ್ನು ಮಾತ್ರ ತರಬೇಕು.
- ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರು ಹೊದಿಕೆಯನ್ನು ಮಾತ್ರ ತರಬೇಕು.
- ಶಿಬಿರಕ್ಕೆ ಬರುವವರು ಮನೆಯ ವಿಳಾಸ, ದೂರವಾಣಿ ಸಂಖ್ಯೆನ್ನು ತರಬೇಕು.
- ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಆಧಾರಕಾರ್ಡ್, ಬಿಪಿಎಲ್ ಕಾಡ್ ಮತ್ತು ಓಟರ್ ಐಡಿಯ ಜೆರಾಕ್ಸ್ ಪ್ರತಿಯನ್ನು ತರಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post